ದಾವಣಗೆರೆ : ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಅಭಿಮಾನಿ ಬಳಗದ ಆಶ್ರಯದಲ್ಲಿ ಇಂದು ಸಾಯಂಕಾಲ ಹಿಂದಿ ಚಲನಚಿತ್ರ ಗೀತೆಗಳ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಜೂ. ಎಸ್.ಪಿ. ಬಾಲಸುಬ್ರಮಣ್ಯಂ ಎಂಬ ಪ್ರಖ್ಯಾತಿ ಹೊಂದಿರುವ ಸಲ್ಮಾನ್ ಅವರು ಅರ್ಪಿಸುವ ಈ ಕಾರ್ಯಕ್ರಮ ಸಂಜೆ 6 ಗಂಟೆಗೆ ಆಯಿಷಾ ಶಾದಿಮಹಲ್ ನಲ್ಲಿ ನಡೆಯಲಿದೆ. ಸ್ಥಳೀಯ ಕಲಾವಿದರು ಹಾಡಿ ರಂಜಿಸಲಿದ್ದಾರೆ. ಪತ್ರಕರ್ತ ಬಿ. ಸಿಕಂದರ್, ಅತಿಥಿಗಳಾಗಿ ಪಾಲ್ಗೊಳ್ಳುವರು.
January 15, 2025