ದಾವಣಗೆರೆ, ಜು.17- ಇಲ್ಲಿನ 33ನೇ ವಾರ್ಡ್ನಲ್ಲಿರುವ ಪಾರ್ಕ್ ಪಕ್ಕದ ವಾಹನ ನಿಲುಗಡೆಯ ಜಾಗ ಒತ್ತುವರಿ ಆಗಿರುವುದನ್ನು ಸರಿಪ ಡಿಸುವಂತೆ ಪಾಲಿಕೆ ಆಯುಕ್ತರಿಗೆ ಪಿ.ರುದ್ರೇಶ್ ಮನವಿ ಮಾಡಿದ್ದಾರೆ.
ಸಾರ್ವಜನಿಕರ ವಿಶ್ರಾಂತಿಗಾಗಿ ಇಲ್ಲಿ ಪಾರ್ಕಿನ ವ್ಯವಸ್ಥೆ ಮಾಡಲಾಗಿದ್ದು, ಪಾರ್ಕಿನ ಪಕ್ಕ ಅಂದಾಜು 20•80 ಅಡಿ ಅಳತೆಯ ಜಾಗವನ್ನು ವಾಹನ ನಿಲುಗಡೆಗೆ ಮೀಸಲಿಟ್ಟಿದ್ದರು. ಆದರೆ ಪ್ರಭಾವಿ ಯೊಬ್ಬರ ವಿದ್ಯಾಸಂಸ್ಥೆಯು ಈ ಜಾಗವನ್ನು ಆಕ್ರಮಿಸಿ ಗೇಟ್ ನಿರ್ಮಿಸಿದ್ದಾರೆ. ವಿಶ್ರಾಂತಿಗಾಗಿ ಪಾರ್ಕಿಗೆ ಬರುವ ನಾಗರಿಕರು ನಿತ್ಯವೂ ವಾಹನ ನಿಲ್ಲಿಸುವ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಒತ್ತುವರಿಯಾಗಿ ನಿರ್ಮಿತ ಗೇಟ್ ತೆರವುಗೊಳಿಸಿ, ಪಾರ್ಕಿಗೆ ಸಂಬಂಧಿಸಿದ ಈ ಜಾಗವನ್ನು ಸಾರ್ವಜನಿಕರ ವಾಹನ ನಿಲ್ದಾಣಕ್ಕೆ ಅನುಕೂಲ ಮಾಡಿ ಕೊಡುವಂತೆ ಮನವಿ ಮಾಡಿದ್ದಾರೆ.