ತುಮ್ಮಿನಕಟ್ಟೆ ಗ್ರಾಮದ ಕಾರ್ಯಕ್ರಮದಲ್ಲಿ ಪದ್ಮಸಾಲಿ ಪೀಠದ ಸದಾನಂದ ಶ್ರೀಗಳು
ರಾಣೇಬೆನ್ನೂರು, ಜು. 16 – ದಾನ ಮಾಡುವುದು, ಸ್ವೀಕರಿಸುವುದು ಆರೋಗ್ಯಕರ ಸಮಾಜದ ಅವಿಭಾಜ್ಯ ಅಂಗ, ಅಲ್ಲಿ ಪ್ರೀತಿ, ಮಮಕಾರ, ಸಂತೃಪ್ತಿ, ನೆಮ್ಮದಿ ಎಲ್ಲ ಇದೆ. ದಾನ ಮಾಡುವುದರಿಂದ ಬದುಕು ಸುಂದರಮಯವಾಗಿ ರೂಪಗೊಳ್ಳಲಿದೆ ಎಂದು ಮಾರ್ಕಂಡೇಶ್ವರ ಪದ್ಮಸಾಲಿ ಪೀಠದ ಶ್ರೀ ಸದಾನಂದ ಮಹಾಸ್ವಾಮಿಗಳು ನುಡಿದರು.
ಶ್ರೀ ಗಳು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಸಣ್ಣ ಸಂಗಾಪುರದ ಮಂಜಯ್ಯ ಚಾವಡಿ ಗೆಳೆಯರು ಸೇರಿ ಗ್ರಾಮದ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಇದೇ ಶಾಲೆಯಲ್ಲಿ ಕಲಿತು ಬದುಕನ್ನು ಸುಂದರವಾಗಿ ಕಟ್ಟಿಕೊಂಡ ಮಂಜಯ್ಯ ಅವರು ನೋಟ್ ಬುಕ್ ಗಳನ್ನು ದಾನಮಾಡಿ ಸಂಸ್ಥೆಯ ಹಾಗೂ ಕಲಿಸಿದ ಗುರುಗಳ ಪ್ರೀತಿ ಗಳಿಸಿದರು, ನಾವು ನಿಮಗೆ ಹಿತ ನುಡಿಗಳನ್ನು ಹೇಳವಂತೆ, ನೀವೂ ಸಹ ಉತ್ತಮ ಪ್ರಜೆಗಳಾಗಿ ಮುಂದಿನ ದಿನಗಳಲ್ಲಿ ಮತ್ತೊಬ್ಬರಿಗೆ ಸಹಾಯ, ಸಹಕಾರ ನೀಡುವಂತಹ ಬದುಕು ನಿಮ್ಮದಾಗಲಿ ಎಂದು ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಹೊನ್ನಾಳಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ಸಂಗಮೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಶೇಖಪ್ಪ ಬಣಕಾರ, ಕಾಂಗ್ರೆಸ್ ಅಧ್ಯಕ್ಷ ಅಪ್ಪು ಕಲಾಲ ಹೇಳಿದರು.
ಮಹೇಶ್ವರಯ್ಯ ಚಾವಡಿ, ನಿರ್ಮಲ ಚಾವಡಿ, ಪ್ರಾಚಾರ್ಯ ಎಸ್. ಎನ್. ಶೆಟ್ಟಿಕೇರಿ ಮಂಜಯ್ಯ ಚಾವಡಿ, ಕವಿತಾ ಚಾವಡಿ, ಮನೋಹರ, ಮಂಜಪ್ಪ ಕಂಬಳಿ ಮತ್ತಿತರರಿದ್ದರು. ಷಣ್ಮುಖ ಮಧ್ಯಾಹ್ನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.