ದಾವಣಗೆರೆ, ಜು. 16 – ಜಿಲ್ಲಾ ಪ್ರಾಕ್ಟಿಷನರ್ಸ್ ಅಸೋಸಿಯೇಷನ್ ವತಿಯಿಂದ ನಗರದ ಚಾರ್ಟಡ್ ಅಕೌಂಟೆಂಟ್ಸ್ ಭವನದಲ್ಲಿ ನಾಡಿದ್ದು ದಿನಾಂಕ 18ರ ಗುರುವಾರ ಸರಕು ಮತ್ತು ಸೇವಾ ತೆರಿಗೆ ಕುರಿತು ಸೆಮಿನಾರ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ಜಿ. ಮಹಾಂತೇಶ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ತಾಂತ್ರಿಕ ಸಭೆಯಲ್ಲಿ 53ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಬದಲಾವಣೆಗಳು ಮತ್ತು ವೀಕ್ಷಿಸಲು ಸಾಮಾನ್ಯ ದೋಷಗಳು ಕುರಿತು ಶ್ರೀಮತಿ ಅನ್ನಪೂರ್ಣ ಕಬ್ರ ಮಾತನಾಡುವರು. ಎರಡನೇ ತಾಂತ್ರಿಕ ಸಭೆಯಲ್ಲಿ ತೀರ್ಪು ಮತ್ತು ಮೇಲ್ಮನವಿ ಪ್ರಕ್ರಿಯೆಗಳ ತಯಾರಿ ಮತ್ತು ಫೈಲಿಂಗ್ ವಿಷಯದ ಬಗ್ಗೆ ರಾಜೇಶ್ ಕುಮಾರ್ ಟಿ.ಆರ್., ಮತ್ತು ಮೂರನೇ ತಾಂತ್ರಿಕ ಸಭೆಯಲ್ಲಿ ಮೌಲ್ಯಮಾಪನ, ಆಡಿಟ್, ವಿಚಾರಣೆ ಮತ್ತು ತನಿಖೆ ಹೇಗೆ ಎದುರಿಸುವುದು ಎಂದು ಸಿಎ ಜತಿನ್ ಅನಿಲ್ ಕ್ರಿಸ್ಟೋಫರ್ ತಿಳಿಸುವರು. ನಂತರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಹೆಚ್.ಟಿ. ಸುಧೀಂದ್ರ ರಾವ್ ವಹಿಸುವರು. ಹಿರಿಯ ಲೆಕ್ಕ ಪರಿಶೋಧಕ ಎ. ಎಸ್. ವೀರಣ್ಣ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಸ್. ಮಹಾಂತೇಶ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಚ್. ವೀರೇಂದ್ರ ಪಾಟೀಲ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎನ್.ಎಸ್. ನಾಗಸ್ವಾಮಿ, ಕೇಂದ್ರ ತೆರಿಗೆಗಳ ಸಹಾಯಕ ಆಯುಕ್ತ ಸಿ.ತಿರುಮಲೈ ಮುತ್ತು ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.