ಹೆಚ್ಚುವರಿ ಪ್ರೀಮಿಯಂ ವಸೂಲಿ; ಹಣ ಮರುಪಾವತಿಸಲು ಇನ್ಸೂರೆನ್ಸ್ ಕಂಪನಿಗೆ ಆದೇಶ

ದಾವಣಗೆರೆ,ಜು.13-  ಹೆಚ್ಚುವರಿ ಸೌಲಭ್ಯ ಒದಗಿಸುವುದಾಗಿ ಹಾಲಿ ಚಾಲ್ತಿಯಲ್ಲಿದ್ದ  ಆರೋಗ್ಯ ವಿಮೆಗೆ  ಗ್ರಾಹಕರೊಬ್ಬರಿಂದ ಅಧಿಕ ಮೊತ್ತದ ಪ್ರೀಮಿಯಂ ಕಟ್ಟಿಸಿಕೊಂಡಿದ್ದ ಐಸಿಐಸಿಐ ಲ್ಯೋಂಬರ್ಡ್ ಇನ್ಸೂರೆನ್ಸ್ ಕಂಪನಿಯು  25 ಸಾವಿರ  ಮರುಪಾವತಿ ಜೊತೆೆಗೆ 5 ಸಾವಿರ ರೂಪಾಯಿ ಕೋರ್ಟ್ ವೆಚ್ಚ ನೀಡುವಂತೆ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಹೆಚ್.ಡಿ.ಎಫ್‌.ಸಿ ಬ್ಯಾಂಕ್ ಗ್ರಾಹಕರಾಗಿದ್ದ ನಗರದ ಸಾಯಿಪ್ರಕಾಶ್ ಎಸ್.ವೆರ್ಣೇಕರ್ ಅವರು ಬ್ಯಾಂಕಿನ ಮ್ಯಾನೇಜರ್ ಅವರ ಸೂಚನೆಯಂತೆ 2020ರಲ್ಲಿ   ಭಾರತಿ ಆಕ್ಸಿಸ್ ಹೆಲ್ತ್‌ ಇನ್ಸೂರೆನ್ಸ್‌ನಲ್ಲಿ  5 ಲಕ್ಷ ಮೊತ್ತದ  ಆರೋಗ್ಯ ವಿಮೆ ಮಾಡಿಸಿ ಎರಡು ವರ್ಷ ರಿನಿವಲ್ ಕೂಡಾ ಮಾಡಿಸಲಾಯಿತು.

ನಂತರ  ಭಾರತಿ ಆಕ್ಸಿಸ್  ಇನ್ಸೂರೆನ್ಸ್‌ ಕಂಪನಿಯು ಐಸಿಐಸಿಐ ಲ್ಯೋಂಬರ್ಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಮರ್ಜ್ ಆಗಿದೆ. ಆಗಲೂ ಸಹ  ಒಂದು ವರ್ಷ 13370/- ರೂ. ಪ್ರೀಮಿಯಂ ಹಣ ಕಟ್ಟಿದ್ದೆ, 2023ರಲ್ಲಿ  ಇನ್ಸೂರೆನ್ಸ್ ಕಂಪನಿಯವರು ಏಕಾಏಕಿ ಈ ವರ್ಷದಿಂದ ತಾವು  34087/- ರೂಪಾಯಿ ಕಟ್ಟಿ, ನಿಮಗೆ ಹೆಚ್ಚುವರಿ ಸೌಲಭ್ಯ ನೀಡಿರುತ್ತೇವೆ ಎಂದು ತಿಳಿಸಿದರು. ಆದರೆ ನಮಗೆ ಹೆಚ್ಚುವರಿ ಸೌಲಭ್ಯ ಬೇಡ ಇರುವ ಪಾಲಿಸಿಯನ್ನೇ ಮುಂದುವರೆಸಿರಿ ಎಂದು ಕೇಳಿದರೂ ಅದಕ್ಕೆ ಕಂಪನಿಯವರು ಒಪ್ಪಲಿಲ್ಲ. 

ಹಾಗಾಗಿ ಅವರು ಹೇಳಿದಷ್ಟು ಹಣವನ್ನು ಕಟ್ಟಿ, ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋದಾಗ,    25 ಸಾವಿರ  ಮರುಪಾವತಿ ಜೊತೆೆಗೆ 5 ಸಾವಿರ ರೂಪಾಯಿ ಕೋರ್ಟ್ ವೆಚ್ಚ ನೀಡುವಂತೆ  ಆದೇಶಿಸಿದೆ ಎಂದು ಸಾಯಿಪ್ರಕಾಶ್ ತಿಳಿಸಿರುತ್ತಾರೆ.

ಹೆಚ್.ಡಿ.ಎಫ್‌.ಸಿ ಬ್ಯಾಂಕ್,   ಭಾರತಿ ಆಕ್ಸಿಸ್ ಹೆಲ್ತ್‌ ಇನ್ಸೂರೆನ್ಸ್‌ ಕಂಪನಿ ಮತ್ತು   ಐಸಿಐಸಿಐ ಲ್ಯೋಂಬರ್ಡ್ ಇನ್ಸೂರೆನ್ಸ್ ಕಂಪನಿಗಳ ವಿರುದ್ದ  ಸಾಯಿಪ್ರಕಾಶ್ ಮೊಕದ್ದಮೆ ದಾಖಲಿಸಿದ್ದರು. 

ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎಂ.ಐ ಶಿಗ್ಲಿ, ಸದಸ್ಯರಾದ ಸಿ.ಎಸ್. ತ್ಯಾಗರಾಜನ್ ಮತ್ತು ಬಿ.ಯು.ಗೀತಾ ಅವರಿದ್ದ ಪೀಠವು ಈ ತೀರ್ಪು ನೀಡಿದ್ದು, 30 ದಿನಗಳ ಒಳಗಾಗಿ ಹಣವನ್ನು ಪಾವತಿಸಬೇಕು  ತಪ್ಪಿದರೆ, ಆದೇಶದ ದಿನದಿಂದ  ಶೇ.12ರಷ್ಟು ಬಡ್ಡಿಯೊಂದಿಗೆ  ಹಣ ಸಂದಾಯ ಮಾಡಬೇಕು ಎಂದು ಆದೇಶಿಸಲಾಗಿದೆ.

error: Content is protected !!