ವೃತ್ತಿಪರ ಸಿವಿಲ್ ಇಂಜಿನಿಯರ್ ಮಸೂದೆಯನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಶ್ರಮಿಸಿದ ಹಲವು ಪ್ರಮುಖ ಇಂಜಿನಿಯರ್ ಗಳಿಗೆ ಇಂದು ನಗರದಲ್ಲಿ ಸನ್ಮಾನ ಕಾರ್ಯ ನಡೆಯಲಿದೆ.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಫ್ ಇಂಡಿಯಾ ಇದರ ದಾವಣಗೆರೆ ಘಟಕ, ವೃತ್ತಿ ನಿರತ ಸಿವಿಲ್ ಇಂಜಿನಿಯರ್‌ಗಳು ಮತ್ತು ಆರ್ಕಿಟೆಕ್ಟ್‌ಗಳ ಒಕ್ಕೂಟ, ಇನ್ಸ್‌ಸ್ಟ್ರಕ್ಟ್, ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ಹಾಗೂ ಜಿಲ್ಲೆಯ ಹಲವು ವೃತ್ತಿಪರ ಸಿವಿಲ್ ಇಂಜಿನಿಯರ್ ಗಳ ಒಕ್ಕೂಟಗಳು ಈ ಕಾರ್ಯಕ್ರಮವನ್ನು ಆಯೋಜಿಸಿವೆ.
ಈ ಮಸೂದೆಯ ಜಾರಿಗೆ ನಿರಂತರವಾಗಿ ಹೋರಾಟ ಮಾಡಿದ ಇಂಜಿನಿಯರ್‌ಗಳಾದ ಶ್ರೀಕಾಂತ್ ಚಾನಲ್, ಅಜಿತ್ ಕುಮಾರ್ ಮಗ್ದಂ, ಮನಮೋಹನ್ ಕಲ್ಗಲ್, ರಂಗನಾಥ್ ಮುಂತಾದವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಈ ಮಸೂದೆಯ ಕುರಿತು ತಜ್ಞರಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.
ಇಂದು ಬೆಳಿಗ್ಗೆ 10.30ರಿಂದ ಆರಂಭವಾಗುವ ಈ ಕಾರ್ಯಕ್ರಮವು ಕಾರ್ಯನಿರತ ಸಿವಿಲ್ ಇಂಜಿನಿಯರ್ ಹಾಗೂ ಆರ್ಕಿಟೆಕ್ಟ್ (FPACE) ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಇಂಜಿನಿಯರ್ ವೆಂಕಟ್ ರೆಡ್ಡಿ ಮತ್ತು ಸಂಚಾಲಕರಾದ ಇಂಜಿನಿಯರ್ ಜಿ.ಬಿ. ಸುರೇಶ್ ಕುಮಾರ್ ತಿಳಿಸಿದ್ದಾರೆ.