ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ

ದಾವಣಗೆರೆ, ಜು.5- ಜಿಲ್ಲಾದ್ಯಂತ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಯಿತು. ಹಳ್ಳಿಗಳಲ್ಲಿ ಮಾತ್ರ ಅಮವಾಸ್ಯೆ ಸಂಭ್ರಮ ಮನೆ ಮಾಡಿತ್ತು. ಉಳಿದಂತೆ ನಗರದ ಹಳೇ ಭಾಗದಲ್ಲಿ ಒಂದಿಷ್ಟು ಜನ ಈಗಲೂ ಆಚರಣೆ ರೂಢಿಸಿಕೊಂಡು ಬಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಬಸವಣ್ಣನ ರೂಪ ಎಂದೇ ಪೂಜಿಸುತ್ತಾರೆ. ಮುಂಗಾರಿನ ಪ್ರಥಮ ಹಬ್ಬವಾಗಿ ಕಾರ ಹುಣ್ಣಿಮೆಯಲ್ಲಿ ಜೀವಂತ ಎತ್ತುಗಳನ್ನು ಪೂಜಿಸಿ ದರೆ, ಇದಾದ 15 ದಿನದ ನಂತರ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡ ಲಾಗುತ್ತಿದೆ. ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತು ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.

ಎತ್ತುಗಳು ಮರೆಯಾಗಿ ಟ್ರ್ಯಾಕ್ಟರ್‌ಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಮೆರುಗು ಕಳೆದುಕೊಂಡಿದೆ.

error: Content is protected !!