ದಾವಣಗೆರೆ, ಜು. 4- ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ತನ್ನ 17 ವರ್ಷದ ಮಗಳನ್ನು ಹರಿಹರ ಗುತ್ತೂರಿನ ಹಳೇ ಹರ್ಲಾಪುರದ ಸೈಯದ್ ಮೋಸಿನ್ ಅಪಹರಿಸಿದ್ದಾನೆಂದು 2020ರ ಡಿಸೆಂಬರ್ 22ರಂದು ಹರಿಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರ ಬಾಲಕಿಯನ್ನು 2021ರ ಜನವರಿ 18ರಂದು ಪತ್ತೆ ಮಾಡಿದ್ದು, ಸೈಯದ್ ಮೋಸಿನ್ ಅಪಹರಿಸಿ ಗೋವಾ, ಮುಂಬೈಗೆ ಕರೆದುಕೊಂಡು ಹೋಗಿ ಬಾಡಿಗೆ ಮನೆ ಮಾಡಿ ಒತ್ತಾಯಪೂರ್ವಕವಾಗಿ ಅತ್ಯಾಚಾರ ಮಾಡಿದ್ದು ತನಿಖೆಯಿಂದ ತಿಳಿದು ಬಂದಿತ್ತು.
ತನಿಖೆ ನಡೆಸಿದ ತನಿಖಾಧಿಕಾರಿ ಹರಿಹರ ವೃತ್ತ ಸಿಪಿಐ ಸತೀಶ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾ ಧೀಶರಾದ ಶ್ರೀರಾಮ್ ನಾರಾಯಣ ಹೆಗಡೆ ವಿಚಾರಣೆ ನಡೆಸಿ ಆರೋಪ ಸಾಬೀತಾಗಿದ್ದರಿಂದ 2024ರ ಜುಲೈ 3 ರಂದು ಆರೋಪಿಗೆ ಶಿಕ್ಷೆ ವಿಧಿಸಿ ದ್ದಾರೆ. ಪಿರ್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡಿಸಿದ್ದರು.