ಮಕ್ಕಳು ದೊಡ್ಡ ಕನಸು ಕಾಣಬೇಕು, ಅಷ್ಟೇ ಶ್ರಮ ಪಡಬೇಕು

ಮಕ್ಕಳು ದೊಡ್ಡ ಕನಸು ಕಾಣಬೇಕು, ಅಷ್ಟೇ ಶ್ರಮ ಪಡಬೇಕು

ಮಲೇಬೆನ್ನೂರು, ಜು. 4 – ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿರುವ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ತರಬೇತಿಯನ್ನು ತುಮಕೂರಿನ ಟ್ಯಾಕಲ್ ಅಕಾಡೆಮಿಯ ಅಧ್ಯಕ್ಷ ಡಾ.ಹೆಚ್.ಎಸ್ ನಿರಂಜನಾರಾಧ್ಯ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳು ದೊಡ್ಡ ದೊಡ್ಡ ಕನಸು ಕಾಣುವ ಜತೆಗೆ ಅಷ್ಟೇ ಶ್ರಮವಹಿಸಿ ಹಗಲಿರುಳು ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ನಿರಂಜನಾನಂದಪುರಿ ಶ್ರೀಗಳು ಬಹಳ ಆಸಕ್ತಿ ವಹಿಸಿ ಆರಂಭಿಸಿದ ಈ ಕೋಚಿಂಗ್ ಸೆಂಟರ್‌ನಲ್ಲಿ ಉತ್ತಮ ಕಲಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗಲು ಪೂರಕ  ವಾತಾವರಣ ಕಲ್ಪಿಸಿದ್ದಾರೆ ಎಂದರು.

ಟ್ಯಾಕಲ್ ಅಕಾಡೆಮಿ ಕಾರ್ಯದರ್ಶಿ ಪ್ರೊ.ಎಸ್. ಕುಮಾರಸ್ವಾಮಿ, ಪ್ರಾಧ್ಯಾಪಕ ಪ್ರೊ.ಎಂ.ಬಿ. ಸದಾಶಿವಯ್ಯ, ಪ್ರೊ. ಸಿದ್ದಾನಂದ, ಐಎಎಸ್ ಹಾಗೂ ಕೆಎಎಸ್ ತರಬೇತುದಾರ ಡಾ. ಜ್ಯೋತಿ ಪಂಥ್, ಪ್ರಾಧ್ಯಾಪಕ ಪ್ರೊ. ರವಿಶಂಕರ್, ಯತೀಶ್, ಪೃಥ್ವಿ, ಚಂದ್ರಗುಪ್ತ ಮೌರ್ಯ ಸಂಸ್ಥೆಯ ಕಾರ್ಯದರ್ಶಿ ಎಸ್. ನಿಂಗಪ್ಪ, ಪ್ರಾಚಾರ್ಯೆ ಡಾ. ಶೃತಿ ಇನಾಮ್ದಾರ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!