ದಾವಣಗೆರೆ, ಜು. 5 – ಆನಗೋಡು ಬಳಿ ಬಸವಶ್ರೀ ಭಾರತ್ ಪೆಟ್ರೋಲ್ ಬಂಕ್ ಎದುರುಗಡೆ ಎನ್.ಹೆಚ್. 4 ರಸ್ತೆ ದಾಟುತ್ತಿದ್ದ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯೋರ್ವ ಅಪಘಾತದಲ್ಲಿ ಮೃತಪಟ್ಟಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಮುಂದೆಲೆಯಲ್ಲಿ ಕೂದಲು ಇರುವುದಿಲ್ಲ. ತಿಳಿ ಕಪ್ ಬಣ್ಣದ ಟೀ ಶರ್ಟ್, ಸಿಮೆಂಟ್ ಕಲರ್ ಮಾಸಲು ಪ್ಯಾಂಟ್, ಕೆಂಪು ಬಣ್ಣದ ಚಡ್ಡಿ ಧರಿಸಿದ್ದು, ಬಲಗೈ ಮೇಲೆ ವಿಷ್ಣು ಅಂತ ಹಚ್ಚೆ ಗುರುತಿದೆ. ಸಂಬಂಧಪಟ್ಟವರು ಸಂಪರ್ಕಿಸಿ : 08192 253100, ಗ್ರಾಮಾಂತರ ಪೊಲೀಸ್ ಠಾಣೆ 08192 262555.
January 12, 2025