ಹರಿಹರ : ಜಿಟಿಟಿಸಿ ನೇರ ಪ್ರವೇಶಕ್ಕೆ ಆಹ್ವಾನ

ಹರಿಹರ, ಜು.4- ಹರಿಹರದ ಹರ್ಲಾಪುರದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ಡಿಪ್ಲೋಮಾ ಕೋರ್ಸ್‍ಗ ಳಾದ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಆಟೋಮೇಷನ್ ಮತ್ತು ರೊಬೊಟಿಕ್ಸ್, ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನ್ಯುಪ್ಯಾಕ್ಚರಿಂಗ್ ಡಿಪ್ಲೋಮಾ ಕೋರ್ಸುಗಳ ಉಳಿಕೆ ಸೀಟುಗಳ ನೇರ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಈ ಡಿಪ್ಲೊಮಾ ಪಡೆದವರಿಗೆ ಶೇ.100ರಷ್ಟು ಉದ್ಯೋಗವ ಕಾಶ ಇದ್ದು, ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 9845941245, 8884488202 ಸಂಪರ್ಕಿ ಸಲು ಪ್ರಭಾರಿ ಪ್ರಾಚಾರ್ಯ ಶಿವಕುಮಾರ್ ಕೋರಿದ್ದಾರೆ.

error: Content is protected !!