ಸಂತೇಬೆನ್ನೂರಿನಲ್ಲಿ ನಾಳೆ ಉದ್ಯೋಗ ಮೇಳ

ದಾವಣಗೆರೆ, ಜು.4- ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಾಡಿದ್ದು ದಿನಾಂಕ 6 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. 

ವಿವರಕ್ಕೆ 8105122556, 9591088202ನ್ನು ಸಂಪರ್ಕಿಸಬ ಹುದೆಂದು ಉದ್ಯೋಗಾಧಿಕಾರಿ ರವೀಂದ್ರ ಡಿ. ತಿಳಿಸಿದ್ದಾರೆ.

error: Content is protected !!