ನೀಟ್-ಪಿಜಿ ಪರೀಕ್ಷೆ ಮುಂದೂಡಿಕೆ ಖಂಡನೀಯ

ದಾವಣಗೆರೆ, ಜು. 3- ಪರೀಕ್ಷೆಯ ಹಿಂದಿನ ರಾತ್ರಿ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡಿರುವುದನ್ನು ಎಐಡಿಎಸ್‌ಓ ಕರ್ನಾಟಕ ರಾಜ್ಯ  ಕಾರ್ಯದರ್ಶಿ ಅಜಯ್ ಕಾಮತ್ ಖಂಡಿಸಿದ್ದಾರೆ.

ಇದರಿಂದ ಪರೀಕ್ಷೆಗೆ ಮುಂಚಿತವಾಗಿ ಹಾಜರಾಗಬೇಕಿದ್ದ, ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮನ್ನೇ ತಾವು ಸಿದ್ಧಪಡಿಸಿಕೊಳ್ಳುತ್ತಿದ್ದ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಭಾರೀ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿದ್ದಾರೆಂದು ಹೇಳಿದ್ದಾರೆ.

ನೀಟ್-ಪಿಜಿ 2024 ರ ಪರೀಕ್ಷಾ ದಿನಾಂಕ ನಾಲ್ಕು ಬಾರಿ ಬದಲಾಗಿದೆ. ಇದು ಎಲ್ಲಾ ಕಾರ್ಯನಿರತ ವೈದ್ಯರಾಗುವ ಪರೀಕ್ಷಾ ರ್ಥಿಗಳಿಗೆ ಅಪಾರ ಕಿರುಕುಳವನ್ನುಂಟು ಮಾಡಿದೆ. ಅವರ ಕುಟುಂಬ ಮತ್ತು ಕೆಲಸದ ಪ್ರದೇಶಗಳಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಮೂಲಕ ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ತಲುಪಿದ್ದಾರೆ. ಈ ಘಟನೆಯು ನೀಟ್-ಪಿಜಿ ಪರೀಕ್ಷೆಯನ್ನು ನಡೆಸುವಲ್ಲಿ ಕೂಡ ದೊಡ್ಡ ಹಗರಣ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರದ ನಿರ್ಲಕ್ಷ್ಯೆ ಧೋರಣೆ ಯಿಂದ ಉಂಟಾದ ಇಂತಹ ಪರಿಸ್ಥಿತಿಯನ್ನು ಖಂಡಿಸಲು ನಮ್ಮಲ್ಲಿ ಯಾವುದೇ ಪದವಿಲ್ಲ. ಕೆಲ ದಿನಗಳ ಹಿಂದೆ ಯುಜಿಸಿ-ನೆಟ್ ಪರೀಕ್ಷೆಯನ್ನು ಪರೀಕ್ಷೆ ಮುಗಿದ ಕೇವಲ 24 ಗಂಟೆಗಳ ನಂತರ ಮಾತ್ರ ರದ್ದುಗೊಳಿಸಲಾಯಿತು. 

ಸಿಎಸ್‌ಐಆರ್ ನೆಟ್ ಕೂಡ ಮುಂದೂಡಲಾಗಿದೆ. ಈ ಎಲ್ಲಾ ಘಟನೆಗಳು ನೀಟ್- ಯುಜಿ-2024 ರ ಹಗರಣದ ಹಿನ್ನೆಲೆಯಲ್ಲಿ ಸಂಭವಿಸಿದ್ದು, ಇದು ಭಾರತದಲ್ಲಿ ಶಿಕ್ಷಣ
ಕ್ಷೇತ್ರದಲ್ಲಿ ನಡೆದ ಅತಿ ದೊಡ್ಡ ಹಗರಣವಾಗಿದೆ ಎಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಗರಣದ ವಿರುದ್ಧ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ವಿದ್ಯಾರ್ಥಿಗಳ ಹೋರಾಟದ ಒತ್ತಡದಲ್ಲಿ ಸರ್ಕಾರವು ಎನ್‌ಟಿಎಯು ಮಹಾನಿರ್ದೇಶಕರನ್ನು ತೆಗೆದು ಹಾಕುವ ಮೂಲಕ ಹಗರಣದ ಆರೋಪಗಳನ್ನು ಮರೆ ಮಾಚಲು ಪ್ರಯತ್ನಿಸುತ್ತಿದೆ. ಆದರೆ ಎನ್‌ಟಿಎ ರದ್ದುಗೊಳಿಸುವ ಮತ್ತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂದು ಹೇಳಿದ್ದಾರೆ.

ಹಗರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. 

ಕೇಂದ್ರ ಆರೋಗ್ಯ ಮತ್ತು ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!