ದಾವಣಗೆರೆ, ಜು. 3- ನಗರದ ತೊಗಟವೀರ ಸಮಾಜದ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ತೊಗಟವೀರ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಪಡೆದ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದ ಅರ್ಹ ವಿದ್ಯಾರ್ಥಿಗಳು ಆಗಸ್ಟ್ 1 ರೊಳಗಾಗಿ ಶ್ರೀ ತೊಗಟವೀರ ಸಮಾಜ ಸೇವಾ ಸಮಿತಿ ಟ್ರಸ್ಟ್ (ತೊಗಟವೀರ ಸಮುದಾಯ ಭವನ) ಇವರಿಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ವಿವರಕ್ಕೆ ಸಂಪರ್ಕಿಸಿ : ಶ್ರೀಧರಮೂರ್ತಿ (9743098298).