ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಎನ್‌ಎಸ್‌ಎಸ್ ಶಿಬಿರದ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಗ್ರಾಮದ ಮುಖಂಡ ಕೆ. ಬಸವಂತಪ್ಪ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10ಕ್ಕೆ ಸಿಟಿ ಸೆಂಟ್ರಲ್ ಹಾಸ್ಪಿಟಲ್‌ನ ಡಾ. ಆದರ್ಶ ಹೆಗಡೆ ಅವರಿಂದ `ಮೂಲಭೂತ ಜೀವ ರಕ್ಷಣಾ ತಂತ್ರಗಳು’ ಕುರಿತಂತೆ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವರು.
ಸಂಜೆ 5ಕ್ಕೆ ಹಿರಿಯ ಮನೋಚಿಕಿತ್ಸಕ ಡಾ. ನಾಗರಾಜ್ ರಾವ್ ಹಾಗೂ ಪ್ರಾಧ್ಯಾಪಕ ಡಾ.ಎಸ್. ವೆಂಕಟೇಶ್ ಬಾಬು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಡಾ.ಕೆ. ಸಿದ್ದಪ್ಪ ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.