ದಾವಣಗೆರೆ, ಜು. 3 – ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 5ರ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ನಂತರ ಬೆಳಿಗ್ಗೆ 8 ರಿಂದ ಪ್ರಸಾದ ದಾಸೋಹ ಏರ್ಪಡಿಸಲಾಗಿದೆ.
ಕಣಕುಪ್ಪಿ ಮಂಜುಳ ದೇವರಾಜು ಮತ್ತು ಮಕ್ಕಳು, ವಿದ್ಯಾನಗರ ಪ್ರಸಾದದ ಸೇವಾಕರ್ತರಾಗಿದ್ದಾರೆ. ವಿವರಕ್ಕೆ ಕಣಕುಪ್ಪಿ ಮುರುಗೇಶಪ್ಪ (96118 89151), ಟಿ.ಜಿ. ಬಕ್ಕೇಶಪ್ಪ (91089 88898) ಬಿ.ಚಿದಾನಂದಪ್ಪ (98455 28449), ಮಲ್ಲಾಬಾದಿ ಗುರುಬಸವರಾಜ್ (79757 97079) ತಿಳಿಸಿದ್ದಾರೆ. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಬಹುದು.