ರಾಣೇಬೆನ್ನೂರು, ಜು.2- ನಗರದ ಹೊರವಲಯದ ನೇಕಾರ ಬಡಾವಣೆ ಬಳಿ ನಿನ್ನೆ ತಡರಾತ್ರಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ನಗರದ ನಂದನ ಶಿವಪ್ಪನವರ ಹಾಗೂ ವೈಭವ ಪಟ್ಟಣಶೆಟ್ಟಿ ಎನ್ನುವ ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನಾಲ್ವರು ಸ್ನೇಹಿತರು ತಡರಾತ್ರಿ ಮದ್ಯಸೇವನೆ ಮಾಡಿ ಮನೆಗೆ ತೆರಳುತ್ತಿದ್ದರೆಂದು, ಮದ್ಯದ ಅಮಲಿನಲ್ಲಿ ಒಂದು ವಾಹನ ಸವಾರರ ನಿಯಂತ್ರಣಕ್ಕೆ ಬರದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.