ದಾವಣಗೆರೆ, ಜು. 1- ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ 2024-29 ನೇ ಸಾಲಿಗೆ ಚುನಾವಣೆ ನಡೆಯಲಿದ್ದು, ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯ ನೌಕರರ ವಿವರ ಪಡೆದುಕೊಂಡು ಕರಡು ಮತದಾರರ ಪಟ್ಟಿ ತಯಾರಿಸಲಾಗಿದೆ.
ಸರ್ಕಾರಿ ನೌಕರರ ಇಲಾಖಾವಾರು ಕರಡು ಮತದಾರರ ಪಟ್ಟಿಯನ್ನು ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನ, ದಾವಣಗೆರೆ ಇಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಇದೇ ದಿನಾಂಕ 10 ರೊಳಗಾಗಿ ಸಲ್ಲಿಸಲು ಜಿಲ್ಲಾಧ್ಯಕ್ಷ ಎಸ್ ವೀರೇಶ ತಿಳಿಸಿದ್ದಾರೆ.