ದಾವಣಗೆರೆ. ಜು.1- ಜನನ, ಮರಣ ನೋಂದಣಿಗೆ ಸರ್ಕಾರದ ಆದೇಶ ದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಜನನ, ಮರಣ ಉಪ ನೋಂದ ಣಾಧಿಕಾರಿಗಳಾಗಿ ನೇಮಕ ಮಾಡಿ ಆದೇಶಿಸಿದ್ದು, ಇಂದಿನಿಂದ ಗ್ರಾಮೀಣ ಪ್ರದೇಶದಲ್ಲಿ ಜನನ, ಮರಣಗಳ ನೋಂದಣಿಯನ್ನು ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಲಾಗುತ್ತಿದೆ. ಜನನ, ಮರಣ ಘಟನೆಗಳು ಘಟಿಸಿದ 21 ದಿನಗಳೊಳಗಾಗಿ ನೋಂದಾಯಿಸಿ, ಉಚಿತವಾಗಿ ಪ್ರಮಾಣ ಪತ್ರ ಪಡೆಯಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.
January 10, 2025