ಶಿವನಕೆರೆ ಬಸವಲಿಂಗಪ್ಪ ಅವರ `ವಚನ ಧರ್ಮದಲ್ಲಿ ನಡೆ-ನುಡಿ ಸಿದ್ಧಾಂತ’ ಎಂಬ ಪುಸಕ ಬಿಡುಗಡೆ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಸಾದರ ಶರಣ ತತ್ವ ಚಿಂತಕರು, ಬೆಂಗಳೂರು ಆಗಮಿಸುವರು. ಸಾನ್ನಿಧ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಾಡೋಜ ಡಾ. ಶ್ರೀ ಬಸವ ಲಿಂಗ ಪಟ್ಟದೇವರು, ಹಿರೇಮಠ ಸಂಸ್ಥಾನ ಹಾಗೂ ಶ್ರೀ ಮದ್ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇದ್ರ ಮಹಾ ಸ್ವಾಮೀಜಿ, ಬೆಕ್ಕಿನ ಕಲ್ಮಠ ಆನಂದಪುರ ಸಾನ್ನಿಧ್ಯ ವಹಿಸುವರು.