ದಾವಣಗೆರೆ, ಜೂ. 30- ಹಿರಿಯ ವಕೀಲ ಎನ್. ಜಯದೇವನಾಯ್ಕ ಅವರನ್ನು ರಾಜ್ಯ ಸರ್ಕಾರವು ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕ ಹರ್ಷ ವ್ಯಕ್ತಪಡಿಸಿದೆ ಎಂದು ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಪಕ್ಷದ ನಿಷ್ಠಾವಂತ ವಕೀಲರುಗಳಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಘಟಕದ ಪದಾಧಿಕಾರಿಗಳಾದ ಎಂ.ನಾಗೇಂದ್ರಪ್ಪ, ಎನ್.ಎಂ.ಆಂಜನೇಯ, ಸೈಯದ್ ಖಾದರ್, ಕಂಚಿಕೆರೆ ಮಂಜಪ್ಪ, ಆನಂದ್, ಪ್ರದೀಪ್ ಲೋಕಿಕೆರೆ, ಕೃಷ್ಣಾನಾಯ್ಕ ಉಪಸ್ಥಿತರಿದ್ದರು.
January 9, 2025