ದಾವಣಗೆರೆಯ ಚಾಣಕ್ಯ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಕಕ್ಕರಗೊಳ್ಳ ಗ್ರಾಮದ ಸಮುದಾಯ ಭವನದಲ್ಲಿ ಎನ್‌ಎಸ್‌ಎಸ್ ಶಿಬಿರದ ಕಾರ್ಯಕ್ರಮಗಳು ನಡೆಯಲಿದೆ.
ಬೆಳಗ್ಗೆ ಗ್ರಾಮದ ಮುಖಂಡ ಕೆ.ಜಿ. ಬಸನಗೌಡ್ರು ಧ್ವಜಾರೋಹಣ ನೆರವೇರಿ ಸುವರು. ನಂತರ ಡಾ.ವಿ. ಮಹಮ್ಮದ್ ಮುಜ್ತಾಬಾ ಅವರು `ಕೃಷಿ ದೇಶದ ಬೆನ್ನೆಲಬು’ ಎಂಬ ವಿಷಯ ಕುರಿತು ಉಪನ್ಯಾಸ ನೀಡು ವರು. ಸಂಜೆ 5.30ಕ್ಕೆ ಅರಣ್ಯ ಸಂರಕ್ಷಣಾಧಿ ಕಾರಿ ಎನ್.ಎಸ್. ರಾಘವೇಂದ್ರ ಅವರು `ಅರಣ್ಯ ಮತ್ತು ಸಂರಕ್ಷಣೆ ಜಾಗೃತಿ’ಕುರಿತು ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಗ್ರಾಮದ ಮುಖಂಡ ಆರ್.ಡಿ. ಕುಲಕರ್ಣಿ ಮತ್ತು ಗಣ್ಯರು ಭಾಗವಹಿಸುವರು.