ದಾವಣಗೆರೆ, ಜೂ.30- ಸುಕಲ್ಪ ಎನ್ನುವ ಎರಡು ದಿನಗಳ ರಾಜ್ಯ ಮಟ್ಟದ ತಾಂತ್ರಿಕ ಮೇಳವನ್ನು ನಗರದ ಜಿಎಂ ಯೂನಿವರ್ಸಿಟಿಯ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಆಯೋಜಿಸಲಾಗಿದೆ ಎಂದು ಐಎಸ್‌ಇ ಮುಖ್ಯಸ್ಥ ಹಾಗೂ ಸುಕಲ್ಪದ ಸಂಚಾಲಕ ಡಾ.ಟಿ.ಎಂ. ವೀರಗಂಗಾಧರ ಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ದಿನಾಂಕ 1 ಹಾಗೂ 2ರಂದು ಎರಡು ದಿನಗಳ ಕಾಲ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿವೆ.
ಮೊದಲನೇ ದಿನ ಕೊಡ ಕ್ಯಾಶ್, ಹ್ಯಾಕಥಾನ್, ಈ ಸ್ಪೋರ್ಟ್ಸ್ ಸ್ಪರ್ಧೆ ನಡೆಯಲಿದೆ. ಎರಡನೇ ದಿನ ಟೆಕ್‌ಮೇಜ್, ಇಂಜಿನಿಯರ್ಸ್ ಆಯ್, ಐಡಿಯಾ ಟ್ಯಾಂಕ್ ಸೇರಿದಂತೆ ಮುಂತಾದ ಸ್ಪರ್ಧೆಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಸುಕಲ್ಪದ ಸಂಯೋಜಕರಾದ ಪ್ರೊ. ನಸ್ರೀನ್ ತಾಜ್ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ಲೇಸ್‌ಮೆಂಟ್ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ, ಟಿ.ಆರ್, ಐಎಸ್‌ಸಿ ವಿಭಾಗದ ಪ್ರಾಧ್ಯಾಪಕ ಪ್ರೊ.ಇಮ್ರಾನ್ ಖಾನ್ ಇದ್ದರು.