ಆಕಾರ ಚಿಕ್ಕದು, ಜನಪರ ಆಶಯಗಳು ಅಪಾರ…

ಆಕಾರ ಚಿಕ್ಕದು, ಜನಪರ ಆಶಯಗಳು ಅಪಾರ…

ತಾನು ಹುಟ್ಟಿ ಬೆಳೆದ ಪರಿಸರವನ್ನು ಪ್ರೀತಿಸುತ್ತಾ, ಅಲ್ಲಿನ ಜನರ ವಾತ್ಸಲ್ಯದಲ್ಲಿ ತಾಯಿ-ತಂದೆಯರ‌ ಮಮತೆಯನ್ನು ಕಾಣುವ, ಕನ್ನಡ ನಾಡು-ನುಡಿ, ಸಂಸ್ಕೃತಿಯ ಪರ ಸದಾ ಚಿಂತಿಸುವ, ಸನಾತನ ಹಿಂದೂ ಧರ್ಮದ ರಕ್ಷಣೆಯನ್ನು ರಕ್ತದ ಕಣಕಣದಲ್ಲಡಗಿಸಿ ಕೊಂಡಿರುವ ರಾಣೇಬೆನ್ನೂರು  ನಗರಸಭೆ ಸದಸ್ಯ ಪ್ರಕಾಶ ಬುರುಡಿಕಟ್ಟಿ ಅವರು ಇಂದು 39 ರತ್ತ ಹೆಜ್ಜೆ ಹಾಕಲಿದ್ದಾರೆ.

ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿ, ಕುಟುಂ ಬಕ್ಕೆ ಅಂಟಿದ ಪೈಲ್ವಾನ್ ಗಿರಿಯ ದಷ್ಟ -ಪುಷ್ಟತೆ ಯನ್ನು ಉಳಿಸಿಕೊಂಡು, ಜೊತೆಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ ಆರೋಗ್ಯ ವಂತ ಯುವಕರ ದಂಡು ಬೆಳೆಸಿರುವ, ಸರ್ವ ಧರ್ಮದ ಬಡಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಗಟ್ಟಿತನ ಮೈಗೂ ಡಿಸಿಕೊಂಡು, ಅವರಿಗೆ ಸಿಗುವ  ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಗಳ ಸೌಲಭ್ಯಗಳನ್ನು ದೊರಕಿಸಲು ಜನಸಂಪರ್ಕ ಕಛೇರಿ ತೆರೆದಿದ್ದಾರೆ.

8 ನೇ ಶತಮಾನದಿಂದ ನಗರದ ಇತಿಹಾಸ ಪರಿಚಯಿಸುವ `ಬಿನ್ನವೂರು’ ಪುಸ್ತಕವನ್ನು ಮುದ್ರಿಸಿ ಹಂಚಿರುವುದು, ಶಾಲಾ ಮಕ್ಕಳಿಗೆ ಸುಧಾಮೂರ್ತಿ ಅವರಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜನೆ,  ನಗರಸಭೆಯ ವಿವಾದಿತ ಜಾಗಗಳನ್ನು ನಗರಸಭೆಗೆ ಮರಳಿ ಕೊಡಿಸುವುದು, ಕೋವಿಡ್ ಸಮಯದಲ್ಲಿ ವಿವಿಧ ಕ್ಷೇತ್ರದ 8 ಸಾವಿರ ಕುಟುಂಬಗಳಿಗೆ  ದಿನಸಿ ಸಾಮಗ್ರಿಗಳ ಕಿಟ್ ವಿತರಣೆ. ಮೂವರು ಅನಾಥ  ಹೆಣ್ಣು ಮಕ್ಕಳ ಬದುಕಿಗೆ ದಾರಿ ಮಾಡಿದ್ದು, ಶಾಲಾ ಮಕ್ಕಳಿಗೆ ಉಚಿತ ಸೈಕಲ್, ನೋಟ್ ಪುಸ್ತಕ, ಬ್ಯಾಗ್ ವಿತರಣೆ, ಪ್ರತಿ ವರ್ಷ ಯುವಶಕ್ತಿ ಜೊತೆಗೂಡಿ ರಕ್ತದಾನ. ಹೀಗೆ `ಆಡು ಮುಟ್ಟದ  ಸೊಪ್ಪಿಲ್ಲ, ಪ್ರಕಾಶ ಮಾಡದ ಸೇವಾ ಕಾರ್ಯಗಳಿಲ್ಲ’ ಎನ್ನುವ ಅಭಿಮಾನದ ಮಾತುಗಳು ಜನರಲ್ಲಿ ಕೇಳಿಬರುತ್ತಿವೆ.

ನಮ್ಮ ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆ ಎಲ್ಲವುಗಳನ್ನು ಗಣೇಶ ಹಬ್ಬದ ಮೂಲಕ ನೆನಪಿಸುವ ಕಾರ್ಯವನ್ನು  ತಮ್ಮದೇ ಆದ `ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ’ ಮೂಲಕ `ರಾಣೇಬೆನ್ನೂರ ಕಾ ರಾಜಾ’  2009 ರಿಂದ ನಿರಂತರವಾಗಿ ಆಚರಣೆಯಲ್ಲಿದ್ದು, ಮುಂದುವರೆದಿದೆ.

ಅಪರೂಪದ ಮದುವೆ:    ತನ್ನ ಮದುವೆಯ ಜೊತೆ ಸರ್ವ ಸಮಾಜದ 132 ಜೊತೆ ವಧು-ವರರಿಗೂ ಕಂಕಣ ಭಾಗ್ಯ ಕಲ್ಪಿಸಿ ತಲಾ 25 ಸಾವಿರ ಸಹಾಯ ಧನ ನೀಡಿದ್ದರು. ಸರ್ವರಿಗೂ ಭಗವದ್ಗೀತೆಯ ಸಾರವನ್ನು ತಿಳಿಸಬೇಕು ಎನ್ನುವ ಮಹದಾಸೆಯೊಂದಿಗೆ  ಸರ್ವ ಸಮಾಜಗಳ  75  ಸಾವಿರ ಕುಟುಂಬಗಳಿಗೆ ಭಗವದ್ಗೀತೆ ಗ್ರಂಥಗಳ ಜೊತೆಗೆ ತನ್ನ ಲಗ್ನಪತ್ರಿಕೆ ಮತ್ತು ಬಡವರಿಗೆ ಉಡುಗೊರೆ ನೀಡಿ ಮದುವೆಗೆ ಆಹ್ವಾನಿಸಿದ್ದರು. ಇದೊಂದು ಹಿಂದೆಂದೂ ಕಾಣದ, ಮುಂದೆಯೂ ಕಾಣಲಾರದ ಅಪರೂಪದ ಮದುವೆಯಾಗಿದೆ.

– ಮನೋಹರ ಮಲ್ಲಾಡದ, ರಾಣೇಬೆನ್ನೂರು.

error: Content is protected !!