ರಾಣೇಬೆನ್ನೂರು, ಜೂ.28- 100 ಮಹಿಳೆಯರಿಗೆ ಸ್ವಗ್ರಾಮದಲ್ಲಿಯೇ ಗೃಹ ಮತ್ತು ಸೂಕ್ಷ್ಮ ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಸುವ ಆಹಾರ ಸಂಸ್ಕರ ಣಾದಾರರ ಮಹಿಳಾ ಸಹಕಾರ ಸಂಘಗಳ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ಸಮಾರಂಭವು ನಾಡಿದ್ದು ದಿನಾಂಕ 30 ರ ಭಾನುವಾರ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆಯಲಿದ್ದು, ಸಚಿವ ಶಿವಾನಂದ ಪಾಟೀಲ, ಶಾಸಕ ಪ್ರಕಾಶ ಕೋಳಿವಾಡ ಆಗಮಿಸುವರು ಎಂದು ಒಕ್ಕೂಟದ ಪ್ರವರ್ತಕಿ ರುಕ್ಮಿಣಿ ಸಾವುಕಾರ ತಿಳಿಸಿದರು. ಮನೆಯಲ್ಲಿ ಹಪ್ಪಳ, ಸಂಡಿಗೆ, ಇತರೆ ಖಾದ್ಯ ಪದಾರ್ಥಗಳು, `ರೆಡಿ ಟೂ ಕುಕ್’ ಪದಾರ್ಥಗಳ ಗೃಹ ಕೈಗಾರಿಕೆಗಳು ಕೃಷಿ ನಂತರ ಹೆಚ್ಚು ಉದ್ಯೋಗ ಸೃಷ್ಟಿಸುತ್ತವೆ. ತಾಲ್ಲೂಕಿನ 25 ಗ್ರಾಮಗಳಲ್ಲಿ ಈ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಶೇರು ಸಂಗ್ರಹಿಸಿ ಸಹಾಯಕ ನಿಬಂಧಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅಂದು ಸಂಘಗಳ ಪ್ರಮಾಣ ಪತ್ರ ಕೊಡಲಾಗುವುದು ಎಂದು ರುಕ್ಮಿಣಿ ತಿಳಿಸಿದರು.
February 7, 2025