ನಗರದ ಮಾಗನೂರು ಬಸಪ್ಪ ರೋಟರಿ ಭವನದಲ್ಲಿ ಇಂದು ಬೆಳಗ್ಗೆ 11ಕ್ಕೆ ಸಂಸ್ಥೆಯ ರಜತ ಮಹೋತ್ಸವ ಹಾಗೂ ಟ್ರಸ್ಟ್ ಕಟ್ಟಡದ ಮೊದಲನೇ ಮಹಡಿ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
ರೋಟರಿ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ನ ಸಂಗಮೇಶ್ವರ ಗೌಡರು ಕಾರ್ಯಕ್ರಮ ಉದ್ಘಾಟನೆ ಮಾಡಿದರೇ, ಆರ್.ಎಸ್. ನಾರಾಯಣಸ್ವಾಮಿ ಹಾಗೂ ವೈದೇಹಿ ನಾರಾಯಣಸ್ವಾಮಿ ಕಟ್ಟಡ ಲೋಕಾರ್ಪಣೆ ಮಾಡುವರು. ಕೆ. ಮಧುಪ್ರಸಾದ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಎಚ್.ಕೆ. ಕಲ್ಲಪ್ಪ, ನಯನ್ ಪಾಟೀಲ್, ಎಂ.ಕೆ. ರವೀಂದ್ರ, ಜಿ. ಮುರಿಗೇಂದ್ರಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು.