ರಾಣೇಬೆನ್ನೂರು, ಜೂ. 24 – 2024ರ ಮೇ ತಿಂಗಳಲ್ಲಿ ಜರುಗಿದ ಡಿಪ್ಲೋಮಾ ಪರೀಕ್ಷೆಗಳಲ್ಲಿ ಕೆ.ವ್ಹಿ. ಪಾಲಿಟೆಕ್ನಿಕ್‍ನ ಅಂತಿಮ ವರ್ಷದ ಒಟ್ಟು 38 ವಿದ್ಯಾರ್ಥಿಗಳಿಂದ ಶೇ. 100 ಫಲಿತಾಂಶ ದಾಖಲಾಗಿದೆ.
ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದಲ್ಲಿ ಡಿ.ಆರ್. ಸೂರಜ್ ಮತ್ತು ಭರತಕುಮಾರ್ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಲೆಕ್ಟ್ರೀಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾದಲ್ಲಿ ಸಂಜೀವ್ ಚಿಂದಿ ಮತ್ತು ಸಾಗರ ಗಾಳಿ ಇವರು ಪ್ರಥಮ ಶ್ರೇಣಿಯಲ್ಲಿ ಉಳಿದ ವಿಭಾಗಗಳ ತರಗತಿಗಳಲ್ಲಿ ಬಸಮ್ಮ ಕುಮ್ಮೂರು, ನಾಗರಾಜ ಉದಗಟ್ಟಿ, ಶಿವಾನಿ ಹಿರೇಮಠ , ತಿಮ್ಮರಾಜು ತುಮ್ಮಣ್ಣನವರ, ಬಿ.ಕೆ. ಗಾಯತ್ರಿ, ಕಾರ್ತಿಕುಮಾರ ಕಮ್ಮಾರ, ಪ್ರದಿಪ್, ಎಂ. ಕಾರ್ತಿಕ್, ಎಂ.ಎಂ. ಶಹಬಾಜ್, ಪುನೀತ್, ಎ.ಎಂ. ಮಾಲತೇಶ್, ಬಿ. ಸವಣೂರ್ ಅವರು ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದಾರೆ.