ಕಸಾಪ ಅಭಿನಂದನೆ
ದಾವಣಗೆರೆ, ಜೂ. 24 – ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಪ್ರಥಮ ಮಹಿಳಾ ಸದಸ್ಯರಾಗಿ ಆಯ್ಕೆಗೊಂಡಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆಯಲ್ಲಿ ಇಂದು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ಕನ್ನಡದ ಡಿಂಡಿಮ, ಕನ್ನಡದ ಕಂಪನ್ನು ಪಸರಿಸುವಂತೆ ಮಾಡಿ, ಕನ್ನಡದ ಪ್ರೇಮವನ್ನು ಮೆರೆದಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೂತನ ಸಂಸದರನ್ನು ಸನ್ಮಾನಿಸಲು ಅವರ ನಿವಾಸಕ್ಕೆ ಹೋದಾಗ ತಾವು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕೆಂಬ ಅಂಶವನ್ನು ನೂತನ ಸಂಸದೆಯವರಿಗೆ ತಿಳಿಸಿದಾಗ, ಅವರು ಅತೀವ ಸಂತೋಷದಿಂದ ಸಮ್ಮತಿ ಸೂಚಿಸಿದ್ದರು.
ಪ್ರಭಾ ಅವರು ತಮಗಿರುವ ಕನ್ನಡದ ಅಭಿಮಾನ, ಕನ್ನಡದ ಬಗ್ಗೆ ಇರುವ ಕಳಕಳಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹರ್ಷ ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿ ಅಭಿನಂದಿಸಿದ್ದಾರೆ.