ಬಾಳೆಹೊನ್ನೂರಿನ ಸುಗ್ಗಿಹಬ್ಬದಲ್ಲಿ ರಂಭಾಪುರಿ ಜಗದ್ಗುರುಗಳು
ಬಾಳೆಹೊನ್ನೂರು, ಜೂ. 24 – ಶ್ರಮದ ಬದುಕು ಶ್ರೇಯಸ್ಸಿಗೆ ಮೂಲ. ನೊಂದು ಬೆಂದು ಬಸವಳಿದ ಜೀವನಕ್ಕೆ ಉಲ್ಲಾಸ, ಉತ್ಸಾಹ ತುಂಬುವ ಶಕ್ತಿ ಹಬ್ಬಗಳಿಗಿದೆ ಎಂದು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಭಾನುವಾರ ಸೋಮೇಶ್ವರ ನಗರದ ಶ್ರೀ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ‘ಸುಗ್ಗಿ ಹಬ್ಬ’ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಲೆನಾಡಿನ ಪ್ರಾಂತಗಳಲ್ಲಿ ಹಬ್ಬಗಳ ಆಚರಣೆ ವೈಶಿಷ್ಟ್ಯ ಪೂರ್ಣವಾಗಿರುತ್ತವೆ. ವರ್ಷವಿಡಿ ದುಡಿದು ಬಳಲಿ ಬಂದ ಜನತೆಗೆ ಹೊಸ ಹುಮ್ಮಸ್ಸು ಹಬ್ಬಗಳ ಆಚರಣೆಯಿಂದ ದೊರಕುತ್ತದೆ. ಪ್ರತಿಯೊಂದು ಹಬ್ಬದ ಆಚರಣೆಗೆ ಒಂದಿಲ್ಲ ಒಂದು ಮಹತ್ವ ಇರುವುದನ್ನು ಕಾಣುತ್ತೇವೆ. ಸಂಸ್ಕೃತಿಯ ಉಳಿವು ಹಬ್ಬಗಳ ಆಚರಣೆ ಯಲ್ಲಿದ್ದು, ಜೀವನದ ಉತ್ಕರ್ಷತೆಗೆ ಕಾರಣವಾಗುತ್ತವೆ. ಸಾಮರಸ್ಯ, ಸದ್ಭಾವನೆಗೆ ಹಬ್ಬಗಳ ಆಚರಣೆ ಇನ್ನಷ್ಟು ಬಲ ತಂದು ಕೊಡುತ್ತದೆ. ಶ್ರೀ ಜಗದ್ಗುರು ರೇಣುಕಾ ಚಾರ್ಯರು ಬೋಧಿಸಿದ ವಿಶ್ವ ಬಂಧುತ್ವದ ವಿಚಾರ ಧಾರೆಗಳು ಆದರ್ಶ ಬದುಕಿಗೆ ಸ್ಫೂರ್ತಿ ಉಂಟು ಮಾಡುತ್ತವೆ. ಮನುಷ್ಯ ಕುಡಿತ, ಜೂಜು, ಗುಟಕಾ, ಸರಾಯಿ ಇವು ಗಳಿಂದ ಮುಕ್ತವಾಗಿ ಧರ್ಮ ಮಾರ್ಗದಲ್ಲಿ ಬಾಳಿದರೆ ಯಶಸ್ಸು ನಿಶ್ಚಿತ ವೆಂದ ಅವರು, ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಮೃದ್ಧಗೊಳ್ಳುವುದೆಂದರು. ಬಾಲಚಂದ್ರ ಗೌಡರು, ಶ್ರೀಮತಿ ಹೇಮಲತಾ ಪ್ರಭಾಕರ, ಮಹೇಶ ಆಚಾರಿ, ಪತ್ರಕರ್ತ ಯಜ್ಞಪುರುಷ ಭಟ್ ಸಮಯೋಚಿ ತವಾಗಿ ಹಿತಾತ್ಮಕವಾದ ಚಿಂತನ ನುಡಿಗಳನ್ನು ನುಡಿದ ರು. ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಎಸ್. ಜಯಪ್ರಕಾಶ, ಪ್ರಭಾಕರ ಗುತ್ತಿಗೆದಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಗದಿಗೆಯ್ಯ ಹಿರೇಮಠರಿಂದ ವೇದಘೋಷ ಮತ್ತು ಪ್ರಾರ್ಥನೆ ಜರುಗಿತು. ಗ್ರಾ.ಪಂ. ಸದಸ್ಯ ಜಗದೀಶ್ಚಂದ್ರ ನಿರೂಪಿಸಿದರು.