ರಾಣೇಬೆನ್ನೂರು : ಜಿಲ್ಲಾ ಸ್ಫೋರ್ಟ್ಸ್ ಕರಾಟೆ ಸಂಸ್ಥೆಗೆ ಆಯ್ಕೆ

ರಾಣೇಬೆನ್ನೂರು, ಜೂ. 24 – ಇಂದು ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಸರ್ವ ಸದಸ್ಯರ ಸಭೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು. 

ಇದೇ ಸಂದರ್ಭದಲ್ಲಿ ಕರಾಟೆ ತರಬೇತಿ ನೀಡುವವರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಹಾಗೂ ಮಹಿಳೆಯರ ಮೇಲೆ ಆಗುವ  ಶೋಷಣೆ ಮತ್ತು ಎಲ್ಲ ರೀತಿಯ ದಬ್ಬಾಳಿಕೆ ತಡೆಯುವಲ್ಲಿ ಸಹಕಾರಿ ಆಗಲಿರುವ ಕರಾಟೆ  ಸ್ಪೋರ್ಟ್ಸ್ ಗೆ ಸರ್ಕಾರ  ಅವಶ್ಯ ಪ್ರೋತ್ಸಾಹ ನೀಡುತ್ತಿಲ್ಲ ಎಂದು ನೂತನ ಅಧ್ಯಕ್ಷ  ನಾರಾಯಣ ಪೂಜಾರ ತಮ್ಮ ನೋವು ಹಂಚಿಕೊಂಡರು.

ಅಧ್ಯಕ್ಷ ಶಿಹಾನ್ ನಾರಾಯಣ ಪೂಜಾರ, ಚೇರ್ಮನ್ ಸೆನ್ಸಾಯ್ ಡಿಳ್ಳೆಪ್ಪ ಅಂಬಿಗೇರ, ಉಪಾಧ್ಯಕ್ಷರು ಸೆನ್ಸಾಯ್ ಮನಿಷಾ ಕಬ್ಬೂರ, ಕಾರ್ಯದರ್ಶಿ ಸೆನ್ಸಾಯ್ ವಿ.ಜಿ. ಪವನಕುಮಾರ, ಸಹಕಾರ್ಯದರ್ಶಿ ಸೆನ್ಸಾಯ್ ಮಂಜುನಾಥ ಕೆರೆಕೊಪ್ಪ, ಖಜಾಂಚಿ ಸೆನ್ಸಾಯ್ ನಾಗರಾಜ ಸುಣಗಾರ, ಸಹ ಖಜಾಂಚಿ ಸೆನ್ಸಾಯ್ ಎಚ್.ಎಸ್. ಪವನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ಸೆನ್ಸಾಯ್ ಯಲ್ಲಮ್ಮ ಚಲವಾದಿ ಆಯ್ಕೆಯಾಗಿದ್ದಾರೆ.

error: Content is protected !!