ದಾವಣಗೆರೆ, ಜೂ.22- ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನ ಮತ್ತು ಭಾವ ಸಂಗಮ ಸಂಸ್ಥೆ ಕೊಡ ಮಾಡುವ `ಸಾಧಕ ಸಿರಿ’ ರಾಜ್ಯ ಪ್ರಶಸ್ತಿಗೆ ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅವರು ಭಾಜನರಾಗಿದ್ದಾರೆ. ನಾಳೆ ದಿನಾಂಕ 23ರಂದು ಹುಬ್ಬಳ್ಳಿ ಮಹಾರಾಷ್ಟ್ರ ಮಂಡಳ ಸಭಾಂಗಣದ ಶ್ರೀ ಸಿದ್ದವನಹಳ್ಳಿ ಕೃಷ್ಣಮೂರ್ತಿ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಗಣೇಶ್ ಶೆಣೈಗೆ ಸಾಧಕ ಸಿರಿ ಪ್ರಶಸ್ತಿ
