ಜಿಲ್ಲೆಯ ಮಾಧ್ಯಮದವರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜನ ಕಲ್ಯಾಣ ಟ್ರಸ್ಟ್‌ನಿಂದ ಅರ್ಜಿ

ಜಿಲ್ಲೆಯ ಮಾಧ್ಯಮದವರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜನ ಕಲ್ಯಾಣ ಟ್ರಸ್ಟ್‌ನಿಂದ ಅರ್ಜಿ

ದಾವಣಗೆರೆ, ಜೂ. 21- ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನಕ್ಕಾಗಿ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಪತ್ರಕರ್ತರ/ ಮಾಧ್ಯ ಮದವರ ಮತ್ತು ಮಾಧ್ಯಮ ಛಾಯಾಗ್ರಾಹಕರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಶೈಕ್ಷಣಿಕ ಅವಧಿಗೆ ಪ್ರವೇಶ ಪಡೆದ ಯಾವುದೇ ಶಾಲಾ- ಕಾಲೇಜುಗಳಲ್ಲಿ ವ್ಯಾ ಸಂಗ ಮಾಡುತ್ತಿರುವ, 2024-25ನೇ ಸಾಲಿನ ವಾರ್ಷಿಕ ಶುಲ್ಕಕ್ಕೆ ಅನುಗುಣವಾಗಿ ಟ್ರಸ್ಟ್ ವತಿ ಯಿಂದ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.

ಆಸಕ್ತ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿ  ಯರು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರ ಮೂಲಕ ಕ್ರಮಬದ್ಧವಾದ ಪ್ರಮಾಣ ಪತ್ರ ಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

ನಿಗದಿತ ಅರ್ಜಿ ಆನ್‌ಲೈನ್‌ ಮೂಲಕ ಸಲ್ಲಿಸಲು ಮತ್ತು ವಿವರಗಳಿಗಾಗಿ ಟ್ರಸ್ಟ್‌ನ ಅಂತರ್ಜಾಲ ತಾಣ www.ssjanakalyantrust.org ಸಂಪರ್ಕಿಸಿ. ಯಾವುದೇ ಪತ್ರ ವ್ಯವಹಾರ ಅಥವಾ ದೂರವಾಣಿ ಕರೆಗಳಿಗೆ ಉತ್ತರಿಸಲಾಗುವು ದಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 31 ಕೊನೆ ದಿನಾಂಕ. ಶಾಸಕ, ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ ಅಧ್ಯಕ್ಷತೆಯಲ್ಲಿ ಈ ಟ್ರಸ್ಟ್ ರೂಪುಗೊಂಡಿದೆ.

error: Content is protected !!