ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಆವರಗೆರೆಯ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಆವರಣದಲ್ಲಿ ಇಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶ್ ಎಂ.ಬಿ. ವಹಿಸುವರು. ವಿಶ್ವೇಶ್ವರಯ್ಯ ಬಿ.ಎಂ., ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯದ ಕುರಿತು ಉಪನ್ಯಾಸ ನೀಡುವರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಸೌಭಾಗ್ಯ ಕೆ.ಜಿ., ಪರಿಮಳ ಜಗದೀಶ್, ಮಮತಾ ರುದ್ರಮುನಿ, ನವೀನ್ ಕುಮಾರ್, ಷಡಾಕ್ಷರಪ್ಪ ಎಲೇಬೇತೂರು ಅವರು ಉಪಸ್ಥಿತರಿರುವರು.
January 6, 2025