ಲೋಕಾಯುಕ್ತರ ಬಲೆಗೆ ಕಂದಾಯಧಿಕಾರಿ, ಎಸ್‌ಡಿಎ

ಲೋಕಾಯುಕ್ತರ ಬಲೆಗೆ ಕಂದಾಯಧಿಕಾರಿ, ಎಸ್‌ಡಿಎ

ದಾವಣಗೆರೆ, ಜೂ. 20 – ಮನೆಯೊಂದರ ಇ–ಸ್ವತ್ತು ಮಾಡಿಕೊಡಲು 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಮತ್ತು ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಹಾನಗರ ಪಾಲಿಕೆ ವಲಯ – 1 ಕಚೇರಿಯ ಕಂದಾಯ ಅಧಿಕಾರಿ (ಪ್ರಭಾರ) ಬಿ. ಅನ್ನಪೂರ್ಣ ಹಾಗೂ ದ್ವಿತೀಯ ದರ್ಜೆ ಸಹಾಯಕ ಲಕ್ಕಪ್ಪ ವೈ. ಲೋಕಾಯುಕ್ತ ಬಲೆಗೆ ಬಿದ್ದವರು.

ನಗರದ ಬೇತೂರು ರಸ್ತೆಯ ಇಮಾಂ ನಗರದ 4ನೇ ಕ್ರಾಸ್‌ ನಿವಾಸಿ ಚಂದ್ರಶೇಖರ ಬಿ. ಅವರು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. 

ಇ–ಸ್ವತ್ತು ನೀಡಲು ರೂ. 15,000 ಲಂಚ ನೀಡುವಂತೆ ಲಕ್ಕಪ್ಪ ವೈ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚಂದ್ರಶೇಖರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 

ಗುರುವಾರ ರೂ. 15,000 ಲಂಚ ಕೊಡಲು ಬಂದಾಗ ಕಂದಾಯ ಅಧಿಕಾರಿ ಬಿ. ಅನ್ನಪೂರ್ಣಾ, ರೂ. 25,000ಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪೂರೆ ಮಾರ್ಗದರ್ಶನ ದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ, ಪೊಲೀಸ್‌ ಇನ್‌ಸ್ಪೆಕ್ಟರ್‌ ಗಳಾದ ಸಿ. ಮಧುಸೂದನ್, ಎಚ್‌.ಎಸ್‌. ರಾಷ್ಟ್ರಪತಿ, ಪ್ರಭು ಬಿ. ಸೂರಿನ, ಸಿಬ್ಬಂದಿಗಳಾದ ಆಂಜನೇಯ, ಸುಂದರೇಶ್‌, ಆಶಾ, ಮಲ್ಲಿಕಾರ್ಜುನ, ಲಿಂಗೇಶ್‌, ಧನರಾಜ್‌, ಮಂಜುನಾಥ್‌, ಗಿರೀಶ್‌, ಬಸವರಾಜ, ಜಂಷಿದ್ ಖಾನಂ ಅವರ ತಂಡ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!