ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಬಡ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಜೂ. 20- ಕ್ಷತ್ರಿಯ ಮರಾಠ ವಿದ್ಯಾ ಮತ್ತು ಕಲ್ಯಾಣಾಭಿವೃದ್ಧಿ ಟ್ರಸ್ಟ್‌ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ. 75 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ದಾವಣಗೆರೆ ನಗರ ವ್ಯಾಪ್ತಿಯಲ್ಲಿರುವ ಕ್ಷತ್ರಿಯ ಮರಾಠ ಸಮಾಜದ ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದ್ದಾರೆ.

ಅರ್ಹ ವಿದ್ಯಾರ್ಥಿನಿಯರು ಇಂದಿನಿಂದ ಬರುವ ಜುಲೈ 5ರವರೆಗೆ ಟ್ರಸ್ಟ್‌ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಕಚೇರಿ, ಮಂಡಿಪೇಟೆಯ ರೇಣು ಪೇಂಟ್ಸ್, ಗಡಿಯಾರ ಕಂಬದ ಹತ್ತಿರ ಇರುವ ಊರ್ವಶಿ ಗಾರ್ಮೆಂಟ್ಸ್,  ದೇವರಾಜ ಅರಸು ಬಡಾವಣೆಯ ಸಾವಂತ್ ಕಾಂಪ್ಲೆಕ್ಸ್ ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 10 ರ ಸಂಜೆ 5.30ರೊಳಗೆ ಸಂಘದ ಕಚೇರಿಗೆ ತಲುಪಿಸಬೇಕು.  

ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 94480 05060, 94485 89102, 94497 41211, 93425 14779.

error: Content is protected !!