ಹೊನ್ನಾಳಿ : ಯೋಗಾಸನ ಕ್ರೀಡಾ ಸ್ಪರ್ಧೆಗೆ ಆಹ್ವಾನ

ಹೊನ್ನಾಳಿ, ಜೂ. 20- ಎಸ್ ಜಿ ಎಸ್ ಅಂತರರಾಷ್ಟ್ರೀಯ ಯೋಗ ಪ್ರತಿಷ್ಠಾನವು ಕರ್ನಾಟಕ  ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಹಾಗೂ ಕರ್ನಾಟಕ  ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ವರ್ಲ್ಡ್ ಯೋಗಾಸನ ಇವರುಗಳ ಸಹಕಾರದಲ್ಲಿ ಜುಲೈ ತಿಂಗಳಲ್ಲಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ನಡೆಸುತ್ತಿದೆ.  ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಯೋಗಾಸನ ಕ್ರೀಡಾಪಟುಗಳನ್ನು ಪೆಸಿಫಿಕ್, ಏಶಿಯನ್ ಹಾಗು ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಿಗೆ ಯೋಗಾಸನ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.

ಆಸಕ್ತರು ನಾಳೆ ದಿನಾಂಕ 21ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಅಂತರರಾಷ್ಟ್ರೀಯ ಯೋಗಾಸನ ಸಂಯೋಜಕ ಡಾ. ಎಂ. ನಿರಂಜನ ಮೂರ್ತಿ ತಿಳಿಸಿದ್ದಾರೆ. ವಿವರಗಳಿಗಾಗಿ ಮಹೇಂದ್ರ ಬಿ. ಆರ್. (9901331588) ಅವರನ್ನು ಸಂಪರ್ಕಿಸಬಹುದು.

error: Content is protected !!