ದಾವಣಗೆರೆ, ಜೂ.19- ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿ 2024ನೇ ಮಾಹೆಯಲ್ಲಿ ಎಲ್ಲಾ ಇಲಾಖಾ ನೌಕರರಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ವಾರ್ಷಿಕ ಸದಸ್ಯತ್ವ ಶುಲ್ಕ 2 ನೂರು ರೂ. ಗಳನ್ನು ಕಟಾಯಿಸಿರುವ ನೌಕರರ ವಿವರ ನೀಡಲು ತಿಳಿಸಿದ್ದಾರೆ.
ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಚುನಾವಣೆ ನಡೆಸಲು ಅರ್ಹ ಮತದಾರರನ್ನು ನಿಗದಿತ ನಮೂನೆಯಲ್ಲಿ ತಮ್ಮ ಇಲಾಖೆ ಹಾಗೂ ಅಧೀನ ಕಚೇರಿಗಳಲ್ಲಿ (ದಾವಣಗೆರೆ ತಾಲ್ಲೂಕು ವ್ಯಾಪ್ತಿಗೆ ಸಂಬಂಧಿಸಿದಂತೆ ಅರ್ಹ ಮತದಾರರ ಪಟ್ಟಿ ತಯಾರಿಸಲು ವಿವರವಾದ ಮಾಹಿತಿ) ಭರ್ತಿ ಮಾಡಿ ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ನಾಡಿದ್ದು ದಿನಾಂಕ 21ರ ಒಳಗಾಗಿ ಕಳುಹಿಸಬೇಕೆಂದು ಕ.ರಾ.ಸ.ನೌ. ಸಂಘದ ಜಿಲ್ಲಾಧ್ಯಕ್ಷ ವೀರೇಶ್.ಎಸ್. ಒಡೆಯನಪುರ ತಿಳಿಸಿದ್ದಾರೆ.