ದಾವಣಗೆರೆ, ಜೂ. 19 – ಸಿದ್ದರಾಮೇಶ್ವರ ಬಡಾವಣೆ, ಭಟ್ಟಿ ಲೇಔಟ್‌ನ ಶ್ರೀಮತಿ ಸುಧಾ ಇವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ 15 ಗ್ರಾಂ ಬಂಗಾರವನ್ನು ಮತ್ತು 450 ಗ್ರಾಂ ಬೆಳ್ಳಿಯ ಒಡವೆಗಳನ್ನು ಕಳ್ಳತನ ಮಾಡಿದ್ದ ಎನ್ನಲಾದ ಲಂಬು ದಾದು ಮತ್ತು ಹುಸೇನಿ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿತರಿಂದ 8 ಗ್ರಾಂ 260 ಮಿಲಿಗ್ರಾಂ ಬಂಗಾರದ ಗಟ್ಟಿಯನ್ನು ಮತ್ತು 395 ಗ್ರಾಂ ಬೆಳ್ಳಿಯ ಒಡವೆಗಳನ್ನು ಹಾಗೂ 5000/- ಬೆಲೆಯ ಹಿತ್ತಾಳೆಯ ಹಂಡೆವು ಒಟ್ಟು ಅಂದಾಜು 90,000/- ರೂ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಎಂ.ಸಂತೋಷ ಮತ್ತು ಮಂಜುನಾಥ ಜಿ. ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶ್ರೀಮಲ್ಲೇಶ್ ದೊಡ್ಡಮನಿ, ಗಾಂಧಿನಗರ ವೃತ್ತ ನಿರೀಕ್ಷಕ ಟಿ.ಆರ್ ನಹೀಂ ಅಹಮ್ಮದ್ ರವರುಗಳ ಮಾರ್ಗದರ್ಶನದಲ್ಲಿ ಗಾಂಧಿನಗರ ಠಾಣೆಯ ಪಿ.ಎಸ್.ಐ ಆರ್.ಜೆ ಹಿರೇಮಠ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಹಚ್ಚಿದ್ದಾರೆ.
ಹಿರೇಮಠ್ ಪಿ.ಎಸ್.ಐ ರವರ ನೇತೃತ್ವದಲ್ಲಿ ಎ.ಎಸ್.ಐ ಮಹಮ್ಮದ್ ಖಾನ್, ಮಾರುತಿ, ಖಾಜಾ ಹುಸೇನಿ ಅತ್ತಾರ್, ಶಫಿಉಲ್ಲಾ ಸಿದ್ದಕಲಿ, ಬತ್ತೇರ ಮಾರುತಿ, ಎಲ್ ಗಿರಿಧರ್, ಶ್ರೀಮತಿ ಲಕ್ಷ್ಮಿದೇವಿ, ಹನುಮಂತಪ್ಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ನಿರೀಕ್ಷಕರಾದ ಇಸ್ಮಾಯಿಲ್ ಹಾಗು ಸಿಬ್ಬಂದಿಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.