ದಾವಣಗೆರೆ, ಜೂ. 19- ನಗರದ ಹೆಚ್‌ಕೆಆರ್ ಸರ್ಕಲ್‌ನಲ್ಲಿರುವ ಪತಂಜಲಿ ಅಂಗಡಿ ಮೇಲ್ಭಾಗದಲ್ಲಿರುವ ಓಂ ವೆಲ್‌ನೆಸ್ ಸೆಂಟರ್ ನಲ್ಲಿ ಇದೇ ದಿನಾಂಕ 23ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಜಿಲ್ಲೆಯ ಪಾರಂಪರಿಕ ವೈದ್ಯರುಗಳ ಸಭೆ ಕರೆಯಲಾಗಿದೆ.
ಪಾರಂಪರಿಕ ವೈದ್ಯ ಪರಿಷತ್, ಕರ್ನಾಟಕ ಪಾರಂಪರಿಕ ವೈದ್ಯ ಗುರು-ಶಿಷ್ಯ ಪರಂಪರೆ ಮೂಲಕ ಪರಂಪರೆ ವೈದ್ಯವನ್ನು ಪುನರುತ್ಥಾನಗೊಳಿಸಲು ಕಾರ್ಯೋನ್ಮುಖ ವಾಗಿದ್ದು, ಮೊದಲ ತರಬೇತಿ ಶಿಬಿರ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ 10 ದಿನಗಳ ಕಾಲ ಯಶಸ್ವಿಯಾಗಿ ನಡೆದಿರುತ್ತದೆ. ಪರಿಷತ್ತಿನ ಗೌರವಾಧ್ಯಕ್ಷರಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆದೇಶದ ಮೇರೆಗೆ ಈ ತರಬೇತಿಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದೆಂದು ಪರಿಷತ್ ತೀರ್ಮಾನಿಸಿದ್ದು, ಗುರು-ಶಿಷ್ಯ ಪರಂಪರೆ ತರಬೇತಿ ನಡೆಸಲು ಜಿಲ್ಲಾ ಸಂಚಾಲಕರುಗಳಿಗೆ ಸೂಚಿಸಲಾಗಿರುವ ಪ್ರಯುಕ್ತ ವೈದ್ಯರುಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಭಾಗವಹಿಸಿ ನಿಮ್ಮ ಸಲಹೆ, ಸಹಕಾರ ನೀಡಬೇಕಾಗಿ ಪಾರಂಪರಿಕ ವೈದ್ಯ ಪರಿಷತ್ ಸಂಚಾಲಕರಾದ ಪುಷ್ಪಾ ತಿಳಿಸಿದ್ದಾರೆ.