ರಾಣೇಬೆನ್ನೂರಿನಲ್ಲಿ ನಾಳೆ ಮಹಿಳಾ ಸಬಲೀಕರಣಕ್ಕಾಗಿ ಯೋಗ

ರಾಣೇಬೆನ್ನೂರು, ಜೂ. 19 – ಮಹಿಳಾ ಸಬಲೀಕರಣಕ್ಕಾಗಿ ಪತಂಜಲಿ ಯೋಗ ಪೀಠವು ಕೆ.ಎಲ್. ಸಹಯೋಗದೊಂದಿಗೆ ರಾಣೇಬೆನ್ನೂರು ರಾಜರಾಜೇಶ್ವರಿ ಮಹಿಳಾ ಕಾಲೇಜು ಆವರಣದಲ್ಲಿ ನಾಡಿದ್ದು ದಿನಾಂಕ 21ರಂದು ಬೆಳಿಗ್ಗೆ ವಿವೇಕಾನಂದಾಶ್ರಮದ ಶ್ರೀ ಪ್ರಕಾಶಾನಂದ ಮಹಾರಾಜರ ಸಾನ್ನಿಧ್ಯದಲ್ಲಿ  ಅಂತರರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿದೆ.

ಶಾಸಕ ಪ್ರಕಾಶ ಕೋಳಿವಾಡ, ಬ್ರಹ್ಮಾಕುಮಾರಿ ಮಾಲತಿ, ಮಾಜಿ ಶಾಸಕ ಅರುಣಕುಮಾರ್‌ ಪೂಜಾರ, ತಹಶೀಲ್ದಾರ್‌ ಸುರೇಶ ಕುಮಾರ, ಡಿವೈಎಸ್ಪಿ ಗಿರೀಶ ಬೋಜಣ್ಣನವರ್‌, ಬಿಇಓ ಎಂ.ಎಚ್.ಪಾಟೀಲ,  ವಿ.ಪಿ.ಲಿಂಗನಗೌಡ, ರವೀಂದ್ರ ಬಿಜಾಪೂರ, ಜ್ಯೋತಿ ಜಂಬಗಿ, ವಜ್ರೇಶ್ವರಿ ಲದ್ವಾ, ಆರ್.ಎನ್‌. ರಾಠೋಡ ಭಾಗವಹಿಸುವರು.

error: Content is protected !!