ಬನ್ನಿಕೋಡು : ಎನ್ನೆಸ್ಸೆಸ್ ಶಿಬಿರದಲ್ಲಿ ಇಂದು ಉಪನ್ಯಾಸ

ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದಲ್ಲಿ ದಾವಣಗೆರೆ ಡಿಆರ್‌ಎಂ ಕಾಲೇಜು ಹಾಗೂ ಬನ್ನಿಕೋಡು ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿರುವ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ವಾಸನ್ ಕಣ್ಣಿನ ಆಸ್ಪತ್ರೆಯ ನಾಗರಾಜ್ ಮತ್ತು ಸಿಬ್ಬಂದಿಯವರಿಂದ ಉಚಿತ ನೇತ್ರ ತಪಾಸಣೆ  ಕಾರ್ಯಕ್ರಮ ನಡೆಯಲಿದೆ. 

ಡಾ. ನಟರಾಜ್ ಅವರು ಗರ್ಭ ಧರಿಸಿದ ರಾಸುಗಳ ನಿರ್ವಹಣೆ ಮತ್ತು ಜಾನುವಾರುಗಳಲ್ಲಿ ಲಸಿಕೆಯ ಮಹತ್ವ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು.

ಸಂಜೆ 7.30ಕ್ಕೆ ನಡೆಯುವ ವೇದಿಕೆಯ ಕಾರ್ಯಕ್ರಮದಲ್ಲಿ ದೇಶದ ಏಕತೆ ಮತ್ತು ಸಮಗ್ರತೆ ಸಾಧಿಸುವ ಸಂಕೇತವಾಗಿ ಭಾರತ ಮಾತೆಗೆ ದೀಪದ ಹಣತೆ ಬೆಳಗಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಗುವುದು.

error: Content is protected !!