ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಅಂತರರಾಷ್ಟೀಯ ಯೋಗ ದಿನದ ನಿಮಿತ್ತ ಇಂದಿನಿಂದ ಇದೇ ದಿನಾಂಕ 21ರ ವರೆಗೆ `ಯೋಗ ಸಂಭ್ರಮ’ ನಡೆಯಲಿದೆ. ಇಂದು ಬೆಳಗ್ಗೆ 7.30ಕ್ಕೆ ನಗರದ ನೀಲಕಂಠೇಶ್ವರ ದೇಗುಲದಿಂದ ಒನಕೆ ಓಬವ್ವ ವೃತ್ತ ದವರೆಗೆ ಯೋಗ ನಡಿಗೆ (ಜಾಥಾ) ನಡೆಯಲಿದೆ.
ನಾಳೆ ಗುರುವಾರ ಬೆಳಗ್ಗೆ 7ಕ್ಕೆ ಮುರುಘಾ ಮಠದ ಅನುಭವ ಮಂಟಪದ ಆವರಣದಲ್ಲಿ `ಯೋಗ ಪ್ರದರ್ಶನ’ ಏರ್ಪಡಿಸಲಾಗಿದೆ.
ದಿನಾಂಕ 21ರಂದು ಯೋಗ ಸಂಭ್ರಮದ ಸಮಾ ರೋಪ ಸಮಾರಂಭವು ಶ್ರೀ ಮುರುಘಾ ಮಠದ ಅನುಭವ ಮಂಟಪದಲ್ಲಿ ಶಿವಯೋಗ ಕಾರ್ಯಕ್ರಮದ ಮೂಲಕ ಸಂಪನ್ನಗೊಳ್ಳಲಿದೆ. ಅಂದು ಮಠಾಧೀಶರು, ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸ ಲಿದ್ದು, ಯೋಗ ಪಟುಗಳನ್ನು ಸನ್ಮಾನಿಸಲಾಗು ವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.