ಬನ್ನಿಕೋಡು : ಎನ್ನೆಸ್ಸೆಸ್ ಶಿಬಿರದಲ್ಲಿಂದು ದಂತ ತಪಾಸಣೆ

ಹರಿಹರ ತಾಲ್ಲೂಕು ಬನ್ನಿಕೋಡು ಗ್ರಾಮದಲ್ಲಿ ದಾವಣಗೆರೆ ಡಿಆರ್‌ಎಂ ಕಾಲೇಜು ಹಾಗೂ ಬನ್ನಿಕೋಡು ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿರುವ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ದಂತ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಿಂದ ಆಯೋಜನೆಗೊಂಡಿರುವ ದಂತ ತಪಾಸಣಾ ಶಿಬಿರ  ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6.30 ಕ್ಕೆ ಸಹಾಯಕ ಪ್ರಾಧ್ಯಾಪಕ ಶ್ರೀರಂಗಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 7.30ಕ್ಕೆ ಜಿ.ಎಂ. ಸಿದ್ದಲಿಂಗ ಸ್ವಾಮಿ ಇವರಿಂದ ಯೋಗಾಭ್ಯಾಸ ನಡೆಯಲಿದೆ.

ಸಂಜೆ 6 ಗಂಟೆಗೆ ಜನಪದ ತ್ರಿಪದಿ ಸಾಹಿತ್ಯ-ಸಹಬಾಳ್ವೆ ವಿಷಯವಾಗಿ ಎವಿಕೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ಅವರಿಂದ ಉಪನ್ಯಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಂಥಾಲಯಗಳ ಮಹತ್ವ ವಿಷಯ ಕುರಿತು ಎವಿಕೆ ಮಹಿಳಾ ಕಾಲೇಜಿನ ಗ್ರಂಥಪಾಲಕ ಹೆಚ್. ಸತೀಶ್ ಅವರಿಂದ ಉಪನ್ಯಾಸ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯರಾದ  ಜ್ಯೋತಿ ಕೆಎಸ್. ಮಂಜಪ್ಪ, ಅನಿತಾ ಹಾಲಪ್ಪ, ಜಿ.ಹೆಚ್. ಸಾಕಮ್ಮ ರಾಮಪ್ಪ, ಎಂ.ಎಸ್. ರೇವಣಸಿದ್ದಪ್ಪ ಮತ್ತಿತರರು ಭಾಗವಹಿಸಲಿದ್ದಾರೆ. 

error: Content is protected !!