ಜಗಳೂರು ತಾಲ್ಲೂಕಿನಲ್ಲಿ ರೈತನ ಮೇಲೆ ಕರಡಿ ದಾಳಿ : ತೀವ್ರ ಗಾಯ

ಜಗಳೂರು, ಜೂ.15- ತಾಲ್ಲೂಕಿನ ಭೈರನಾ ಯಕನಹಳ್ಳಿ ಗ್ರಾಮದ ಹನುಮಂತಪ್ಪ (48) ಕರಡಿ ದಾಳಿಗೆ ತುತ್ತಾಗಿ ಗಾಯಗೊಂಡಿದ್ದಾರೆ. ಜಮೀನಿನಲ್ಲಿ ವ್ಯವಸಾಯಕ್ಕೆ ತೆರಳಿದ ವೇಳೆ ಸಂಜೆ 5 ಗಂಟೆ ಸಮಯದಲ್ಲಿ ಏಕಾಏಕಿ 4  ಕರಡಿಗಳು  ದಾಳಿ ನಡೆಸಿವೆ. ಗಾಯಗೊಂಡ ವ್ಯಕ್ತಿಯನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಗಂಭೀರ ಸ್ಥಿತಿ ಕಂಡ ವೈದ್ಯರು ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

error: Content is protected !!