ನಗರದ ಶ್ರೀರಾಮ ದೇವಸ್ಥಾನದಲ್ಲಿ ನಾಡಿದ್ದು `ಯಕ್ಷಪಕ್ಷ’ ಕಾರ್ಯಕ್ರಮಗಳು

ದಾವಣಗೆರೆ, ಜೂ.16- ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್, ಬೆಂಗಳೂರು ವತಿಯಿಂದ `ಯಕ್ಷಪಕ್ಷ’ ತಾಳ ಮದ್ದಲೆ ಕೂಟಗಳು ನಗರದ ಪಿ.ಜೆ.ಬಡಾವಣೆಯಲ್ಲಿರುವ ಖಮಿತ್ಕರ್ ಈಶ್ವರಪ್ಪನವರ ಶ್ರೀರಾಮ ದೇವಸ್ಥಾನದಲ್ಲಿ ಇದೇ ದಿನಾಂಕ 19 ಮತ್ತು 20 ರಂದು ನಡೆಯಲಿವೆ. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. 

ದಿನಾಂಕ 19 ರ ಬುಧವಾರ `ವಾಮನ ಚರಿತ್ರೆ’ ಪ್ರಸಂಗವಿದ್ದು, 20 ರ ಗುರುವಾರ `ಶ್ರೀರಾಮ ನಿರ್ಯಾಣ’ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್, ಎ.ಪಿ.ಫಾಟಕ್ ಮತ್ತು ಅರ್ಥಧಾರಿಗಳಾಗಿ ಉಮಾಕಾಂತ್ ಭಟ್, ವಾಸುದೇವ ರಂಗ ಭಟ್, ಶೇಣಿ ವೇಣುಗೋಪಾಲ್ ಭಟ್, ಅಜಿತ್ ಕಾರಂತ್ ಮತ್ತು ಸುಹಾಸ್ ಮರಾಠೆ ಪಾಲ್ಗೊಳ್ಳುವರು.

error: Content is protected !!