ದಾವಣಗೆರೆ ವಿಶ್ವವಿದ್ಯಾನಿಲಯ, ಧರಾಮ ವಿಜ್ಞಾನ ಪದವಿ ಪೂರ್ವ ಕಾಲೇಜಿನ (ದಾವಣಗೆರೆ) ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬನ್ನಿಕೋಡು ಗ್ರಾಮಸ್ಥರ ಸಂಯುಕ್ತಾ ಶ್ರಯದಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಬನ್ನಿಕೋಡಿನಲ್ಲಿ ಇಂದಿನಿಂದ ದಿನಾಂಕ ಇದೇ 21ರವರೆಗೆ ಏರ್ಪಡಿಸಲಾಗಿದೆ.
ಇಂದು ಸಂಜೆ 5ಕ್ಕೆ ಗ್ರಾಮ ಪಥಸಂ ಚಲನ, ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಹೆಚ್.ಹೆಚ್. ಬಸವರಾಜ್ ವಹಿಸು ವರು. ಖಜಾಂಚಿ ಎ.ಎಸ್. ನಿರಂಜನ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಂ.ಪಿ. ರೂಪಶ್ರೀ, ಪ್ರೊ. ಸಿ.ಹೆಚ್. ಮುರುಗೇಂದ್ರಪ್ಪ, ಡಾ. ಅಶೋಕ್ ಕುಮಾರ್ ವಿ.ಪಾಳೇದ, ಶ್ರೀಮತಿ ಮೀನಾಕ್ಷಿ ಕೋಂ ರವಿಕುಮಾರ್ ಎಸ್.ಬಿ., ಕೆ.ಎಸ್. ಬಸವರಾಜು ಬಿನ್ ಸದಾಶಿವಪ್ಪ, ಡಾ. ರೇಣುಕಾಬಾಯಿ, ಜೆ.ಶಿವಪ್ಪ, ಲಿಂಗರಾಜು ಜೆ.ಆರ್., ಪಿ. ವೀರಪ್ಪ, ಕೆ.ಮರಿಸಿದ್ದಪ್ಪ, ಜಿ.ಹೆಚ್. ರಾಮನಗೌಡ್ರು, ಪಿ.ಎನ್. ವಾಗೀಶ್, ಹೆಚ್. ಹನುಮಂತಪ್ಪ, ಶಿವರಾಜ್ ಎಸ್. ಭಾಗವಹಿಸುವರು.