ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳಾದ ಬಿ.ಆರ್. ಲಕ್ಷ್ಮಣ್‍ರಾವ್, ಹೆಚ್. ಡುಂಡಿರಾಜ್ ಮುಖ್ಯ ಅತಿಥಿಗಳು
ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತ ಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತಾಶ್ರಯುದಲ್ಲಿ ಇಂದು ಸಂಜೆ 5 ಗಂಟೆಗೆ ವಿನ್ನರ್ ಅಕಾಡೆಮಿ ಸಭಾಂಗಣದಲ್ಲಿ ಸ್ಥಳೀಯ ಕವಿಗಳ ಪದ್ಯಗಾಯನ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ನಾಡಿನ ಹಿರಿಯ ಕವಿ, ಸಾಹಿತಿ ಬಿ.ಆರ್. ಲಕ್ಷ್ಮಣ್‍ರಾವ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಾಲಿಗ್ರಾಮ ಗಣೇಶ್ ಶೆಣೈ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಚುಟುಕು ಕವಿ ಹೆಚ್. ಡುಂಡಿರಾಜ್ ಆಗಮಿಸಲಿದ್ದಾರೆ. ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕ ವಿದುಷಿ ಶ್ರೀಮತಿ ವೀಣಾ ಸದಾನಂದ ಹೆಗಡೆ ಅವರು `ಸ್ವರಾಭರಣ’ ಪ್ರಸ್ತುತಿ ನಡೆಸಿಕೊಡಲಿದ್ದಾರೆ. ಶಿವರಾಜ್ ಕಬ್ಬೂರು, ಪೋಟಪ್‍ಲಾಲ್‍ಜೈನ್, ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಉಪಸ್ಥಿತರಿರುತ್ತಾರೆ.
`ಸ್ವರಾಭರಣ’ ಸ್ವರ ಸಂಯೋಜಿಸಲಾದ ಪದ್ಯ ರಚಿಸಿದ ಕವಿ, ಕವಯತ್ರಿ ಮಲ್ಲಿಕಾರ್ಜುನ ಕಲಮರಹಳ್ಳಿ, ಬಿ.ಎನ್. ಮಲ್ಲೇಶ್, ಆನಂದ ಋಗ್ವೇದಿ, ಶ್ರೀಮತಿ ನಾಗರತ್ನ ಮಲ್ಲಿಕಾ ರ್ಜುನ, ಶ್ರೀಮತಿ ಸತ್ಯಭಾಮ ಮಂಜುನಾಥ್, ಸಂತೇಬೆನ್ನೂರು ಪ್ರೈಜ್‍ನಟರಾಜ್ ಮುಂತಾದವರು ಉಪಸ್ಥಿತರಿರುತ್ತಾರೆ.