ದಾವಣಗೆರೆ, ಜೂ.14- ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುವೆಂಪು ಕನ್ನಡ ಭವನದಲ್ಲಿ ನಾಡಿದ್ದು ದಿನಾಂಕ 16ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಣ್ಣ ಮಾಗೋಡ್ರ ವಹಿಸುವರು. ಸುರೇಶ್ ಬಿ. ಇಟ್ನಾಳ್ ಉದ್ಘಾಟಿಸುವರು ಮತ್ತಿತರರು ಉಪಸ್ಥಿತರಿರುವರು.