ಡಿ.ಇಎಲ್.ಇಡಿ ದಾಖಲಾತಿಗೆ ಅವಧಿ ವಿಸ್ತರಣೆ

ದಾವಣಗೆರೆ, ಜೂ.12- 2024 – 2025 ಸಾಲಿನ ಡಿ.ಇಎಲ್.ಇಡಿ ದಾಖಲಾತಿಗಾಗಿ ಈಗಾಗಲೇ ಆಫ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ 3ನೇ ಹಂತದ ಪರೀಕ್ಷೆ ಫಲಿತಾಂಶ ಬರುವವರೆಗೆ ಪ್ರವೇಶಕ್ಕಾಗಿ ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ದಾವಣಗೆರೆ ಸಲ್ಲಿಸಬೇಕು.

ಅರ್ಜಿಯನ್ನು HYPERLINK “http://www.schooleducation.karnataka.gov.in/” \t “_blank” WWW.schooleducation.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಡಯಟ್ ಇಲ್ಲಿಗೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ದೂ.ಸಂ : ಕನ್ನಡ ಮಾಧ್ಯಮ 9164489972, 988030377, 9844401092, 08192-231156, ಉರ್ದು ಮಾಧ್ಯಮ 9164489972, 8867932439, 08192-231156 ಸಂಪರ್ಕಿಸಲು ಡಯಟ್ ಪ್ರಾಚಾರ್ಯರರು ಹಾಗೂ ಪದನಿಮಿತ್ತ ಉಪನಿರ್ದೇಶಕರಾದ ಗೀತಾ ತಿಳಿಸಿದ್ದಾರೆ.

error: Content is protected !!