ಶ್ರೀ ಕನ್ಯಾಕಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆಯ 108ನೇ ವರ್ಷದ ಸುಸ್ಮರಣ ದಿನದ ಪ್ರಯುಕ್ತ ದೇವಿಗೆ ಇಂದು ಬೆಳಿಗ್ಗೆ 6ಕ್ಕೆ ಸುಪ್ರಭಾತ ಕಾಕಡಾರತಿ, ದೇವರುಗಳಿಗೆ ಅಭ್ಯಂಗಸ್ನಾನ, ಉಷ್ಣೋದಕ ಸ್ನಾನ, ಪಂಚಾಮೃತ ಸುಗಂಧ ದ್ರವ್ಯ ಮಿಶ್ರ ಉದಕದಿಂದ ಅಭಿಷೇಕ, ವಿಶೇಷ ಅಲಂಕಾರ, ಗಂಗಾ ಪೂಜಾ, ಆರ್ಯ ವೈಶ್ಯ ಮಹಾಜನಗಳ ಹಾಗೂ ಕೀರ್ತಿಶೇಷ ಶ್ರೀ ಚನ್ನಗಿರಿ ವಿರೂಪಾಕ್ಷಪ್ಪನವರ ಸೇವೆ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರಿಗೆ ಕುಂಕುಮಾರ್ಚನೆ ಮತ್ತು ಜೆ.ಎನ್. ವೆಂಕಟಾಚಲಪತಿ ಶ್ರೇಷ್ಠಿಯವರ 70ನೇ ವರ್ಷದ ಭೀಮರಥ ಶಾಂತಿಯ ಸವಿನೆನಪಿಗಾಗಿ ಪುಡುವಟ್ಟು ಸೇವೆ ಹಾಗೂ ಶ್ರೀ ವೆಂಕಟೇಶ್ವರ ಕಲ್ಯಾಣೋತ್ಸವ ಬೆಳಿಗ್ಗೆ 10.30ಕ್ಕೆ ನೆರವೇರಲಿವೆ.
ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ರಾತ್ರಿ 8ಕ್ಕೆ ಪ್ರಾಕಾರೋತ್ಸವ, ಉಯ್ಯಾಲೆ ಸೇವಾದಿಗಳು, ಮಂತ್ರಪುಷ್ಪ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ ತಿಳಿಸಿದ್ದಾರೆ.